ನವದೆಹಲಿ, ಮೇ 22 (DaijiworldNews/PY) : ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಿಗೆ ಇಂದು ಭೇಟಿ ನೀಡಲಿದ್ದು, ಅಂಫಾನ್ ಚಂಡಮಾರುತ ಅಪ್ಪಳಿಸಿರುವ ಜಾಗಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಅವರು ಇಂದು ಬೆಳಿಗ್ಗೆ 10 ಗಂಟೆಗೆ ಕೋಲ್ಕತ್ತಾಗೆ ಆಗಮಿಸಲಿದ್ದು, ಹೆಲಿಕಾಫ್ಟರ್ ಮೂಲಕ ಪ್ರಯಾ ಬೆಳೆಸಿ ಬಳಿಕ ಒಡಿಶಾದ ಭುವನೇಶ್ವರಕ್ಕೆ ಭೇಟಿ ನೀಡಲಿದ್ದಾರೆ.
ಅಂಫಾನಿ ಚಂಡಮಾರುತದಿಂದ ಹೌರಾ ಹಾಗೂ ಕೊಲ್ಕತ್ತಾ ಸೇರಿದಂತೆ ಹಲವಾರು ಪಟ್ಟಣಗಳು, ಹಳ್ಳಿಗಳು ಹಾಗೂ ನಗರಗಳಲ್ಲಿ ವ್ಯಾಪಾಕವಾಗಿ ಹಾನಿಯಾಗಿರುವುದಾಗಿ ವರದಿಯಾಗಿದೆ. ಪಶ್ಚಿಮ ಬಂಗಾಳವು ದಶಕದಲ್ಲೇ ಕಂಡು ಕೇಳರಿಯದ ಚಂಡಮಾರುತಕ್ಕೆ ಸಾಕ್ಷಿಯಾಗಿದೆ. ಹಲವೆಡೆ ಚಂಡಮಾರುತದ ಅಬ್ಬರಕ್ಕೆ ಬೇರುಸಹಿತ ಮರಗಳು ಕಿತ್ತುಬಂದಿದ್ದು, ಸೇತುವೆಗಳೂ ಕೊಚ್ಚಿಕೊಂಡು ಹೋಗಿವೆ.
ಸರ್ಕಾರವು ಅಂಫಾನ್ ಚಂಡಮಾರುತ ಸಂತ್ರಸ್ತರಿಗೆ ಎಲ್ಲಾ ರೀತಿಯಾದಯ ಮಾಡಲಿದೆ ಎಂದು ಗುರುವಾರ ಪ್ರಧಾನಿ ಮೋದಿ ಅವರು ಆಶ್ವಾಸನೆ ನೀಡಿದ್ದರು. ಇಡೀ ರಾಷ್ಟ್ರವು ಈ ಸವಾಲಿನ ವೇಳೆ ಪಶ್ಚಿಮ ಬಂಗಾಳದೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದ್ದು, ಅಲ್ಲಿರುವ ಜನರ ಯೋಗಕ್ಷೇಮಕ್ಕೆ ಪ್ರಾರ್ಥಿಸುತ್ತಿದೆ ಎಂದು ತಿಳಿಸಿದ್ದಾರೆ.