ಮುಂಬೈ, ಮೇ 22 (DaijiworldNews/PY) : ಕೇರಳ ಮಾದರಿಯನ್ನು ಪಾಟೀಲ್ ಅವರು ಸರಿಯಾಗಿ ಅಧ್ಯಯನ ಮಾಡಿಲ್ಲ ಎಂದು ಅನಿಸುತ್ತಿದೆ. ಕೇಂದ್ರ ಸರ್ಕಾರದ ಮಾರ್ಗದರ್ಶಿಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪಾಲಿಸುತ್ತಿಲ್ಲ. ಅವರು ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪಾಲ್ಗೊಳ್ಳುವುದೆಂದರೆ ಸಮಯ ವ್ಯರ್ಥವೆಂದು ಭಾವಿಸಿದ್ದಾರೆ ಎಂದು ಆಡಳಿತಾರೂಢ ಶಿವಸೇನಾ ಹೇಳಿದೆ.
ಮಹಾರಾಷ್ಟ್ರ ಸರ್ಕಾರವು ಸಾಂಕ್ರಾಮಿಕವನ್ನು ನಿರ್ವಹಿಸುವ ರೀತಿಯನ್ನು ಕೇರಳ ಮಾದರಿ ಜೊತೆ ಬಿಜೆಪಿಯ ಮಹಾರಾಷ್ಟ್ರ ಘಟಕದ ಆಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಹೋಲಿಕೆ ಮಾಡಿ ಟೀಕೆ ಮಾಡಿದ್ದರು. ಈ ಬಗ್ಗೆ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನಾ ಪ್ರತ್ಯುತ್ತರ ನೀಡಿದೆ.
ಚಂದ್ರಕಾಂತ್ ಪಾಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸುವ ಬದಲು ಕೇರಳದಲ್ಲಿ ಪ್ರತಿಭಟನೆ ನಡೆಸಲಿ ಶಿವಸೇನಾ ತಿಳಿಸಿದೆ.
ಪ್ರಧಾನಿ ಮೋದಿ ಅವರು ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇದೆ ಎಂದು ಅದರ ವಿರುದ್ದವಾಗಿ ಹೋರಾಟ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶಿವಸೇನಾ ಹೇಳಿದೆ.
ಪ್ರತಿಪಕ್ಷವು ಕೊರೊನಾ ವಿರುದ್ದದ ಹೋರಾಟದಲ್ಲಿ ಏನಾದರೂ ಸಲಹೆಗಳನ್ನು ನೀಡುವುದಾದರೆ ಸಿಎಂ ಜೊತೆ ಮಾತುಕತೆ ನಡೆಸಲಿ. ಪ್ರತಿಪಕ್ಷಕ್ಕೆ ಈ ರೀತಿ ಮಾಡಲು ಆತ್ಮವಿಶ್ವಾಸವಿಲ್ಲವೇ ಅಥವಾ ಮುಜುಗರವಾಗುತ್ತದೆಯೇ ಎಂದು ಶಿವಸೇನಾ ಕೇಳಿದೆ.