ಬೆಂಗಳೂರು, ಮೇ 22 (DaijiworldNews/PY) : ರಾಜ್ಯದಲ್ಲಿ ಮೇ 21ರ ಸಂಜೆ 5ರಿಂದ ಮೇ 22ರ ಸಂಜೆ 5ರ ವರೆಗೆ 138 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ 5, ಧಾರವಾಡ ದಲ್ಲಿ 2, ತುಮಕೂರು 8, ಚಿಕ್ಕಬಳ್ಳಾಪುರ 53, ಮಂಡ್ಯ 8, ಬಾಗಲಕೋಟೆ 1, ಚಿತ್ರದುರ್ಗ 1, ದಾವಣಗೆರೆ, ಬೆಂಗಳೂರು ನಗರ 5, ವಿಜಯಪುರ 7, ಬೀದರ್ 9, ಬೆಳಗಾವಿ 1, ಹಾವೇರಿ 3, ಉತ್ತರ ಕನ್ನಡ 1, ದಕ್ಷಿಣ ಕನ್ನಡ 1, ಹಾಸನ 14, ರಾಯಚೂರು 10, ಶಿವಮೊಗ್ಗ 2, ಮಂಡ್ಯ 8, ಯಾದಗಿರಿ 2, ಉಡುಪಿ 3 ಮಂದಿಗೆ ಸೋಂಕು ದೃಢಪಟ್ಟಿದೆ.
ದಕ್ಷಿಣ ಕನ್ನಡದಲ್ಲಿ 1, ದಾವಣಗೆರೆ 7, ಕಲಬುರಗಿ 5 ಸೇರಿ ಒಟ್ಟು 26 ಮಂದಿ ಕೊರೊನಾ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ ಒಟ್ಟು 597 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ 1104 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದಾಗಿ ಒಟ್ಟು 41 ಮಂದಿ ಮೃತಪಟ್ಟಿದ್ದಾರೆ.