ಚೆನ್ನೈ, ಮೇ 23 (Daijiworld News/MB) : ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ನಿವಾಸ ವೇದ ನಿಲಯಂನ್ನು ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ವೇದ ನಿಲಯಂ ಹಾಗೂ ಅದರಲ್ಲಿನ ಅಪರೂಪದ ವಸ್ತುಗಳನ್ನು ತಾತ್ಕಾಲಿಕವಾಗಿ ಸರ್ಕಾರದ ವಶಕ್ಕೆ ಪಡೆಯಲು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಲಾಗಿದ್ದು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವೇದ ನಿಲಯಂ ಸೇರಿದಂತೆ ಅದರಲ್ಲಿನ ಪಿಠೋಪಕರಣಗಳು, ಪುಸ್ತಕಗಳು, ಆಭರಣಗಳು ಮತ್ತಿತರ ವಸ್ತುಗಳನ್ನು ಸರ್ಕಾರದ ವಶಕ್ಕೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ.
2019 ರ ಜೂನ್ನಲ್ಲಿ ರಾಜ್ಯ ಸರ್ಕಾರವು ಜಯಲಲಿತಾ ಅವರು ವಾಸ ಮಾಡುತ್ತಿದ್ದ ಮನೆ ವೇದ ನಿಲಯಂನ್ನು ಸ್ಮಾರಕ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿತ್ತು.