ಚಂಢಿಗಡ, ಮೇ 23 (Daijiworld News/MB) : ಪಂಜಾಬ್ ರಾಜ್ಯದಲ್ಲಿ ಒಟ್ಟು 2,029 ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಈ ಪೈಕಿ 1847 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರ ಪ್ರಮಾಣವು ಶೇ. 91ಕ್ಕೆ ಏರಿಕೆಯಾಗಿದೆ.
ಪಂಜಾಬ್ನಲ್ಲಿ ಕೊರೊನಾ ಸೋಂಕಿನಿಂದಾಗಿ ಈವರೆಗೆ 39 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಪಂಜಾಬ್ನಲ್ಲಿ ಶುಕ್ರವಾರ ಒಂದು ಪ್ರಕರಣ ಮಾತ್ರ ವರದಿಯಾಗಿದೆ.
ದೇಶದಲ್ಲಿ 24 ಗಂಟೆಗಳಲ್ಲಿ 6654 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಸೋಂಕಿತರ ಸಂಖ್ಯೆ 125101 ಕ್ಕೆ ಏರಿಕೆಯಾಗಿದ್ದು 3720 ಮಂದಿ ಸಾವನ್ನಪ್ಪಿದರೆ 51784 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.