ಚಿಕ್ಕಮಗಳೂರು, ಮೇ 23 (Daijiworld News/MB) : ಜಿಲ್ಲೆಯ ಮೂಡಿಗೆರೆಯ ವೈದ್ಯಾಧಿಕಾರಿಯ ಕೊರೊನಾ ವರದಿ ಈ ಮೊದಲು ತಪ್ಪಾಗಿ ಪಾಸಿಟಿವ್ ಬಂದಿದ್ದು ಮತ್ತೆ ಪರೀಕ್ಷೆ ನಡೆಸಿದಾಗ ಸೋಂಕು ನೆಗೆಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ, ಶಿವಮೊಗ್ಗ ಪ್ರಯೋಗಾಲಯದಲ್ಲಿ ವೈದ್ಯಾಧಿಕಾರಿಯ ಗಂಟಲ ದ್ರವ, ರಕ್ತ ಮಾದರಿಯನ್ನು ಪರೀಕ್ಷಿಸಲಾಗಿದ್ದು ಸೋಂಕು ನೆಗೆಟಿವ್ ಆಗಿದೆ. ವೈದ್ಯಾಧಿಕಾರಿಯನ್ನು ಆಸ್ಪತ್ರೆಯಿಂದ ಶೀಘ್ರ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ವೈದ್ಯಾಧಿಕಾರಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 961 ಮಂದಿಯನ್ನು ಗುರುತಿಸಿ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು ಪ್ರಾಥಮಿಕ ಸಂಪರ್ಕದಲ್ಲಿದ್ದ 28 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಆಗಿದೆ. ವೈದ್ಯಾಧಿಕಾರಿಗಳಿಗೂ ಸೋಂಕು ಇಲ್ಲ ಎಂದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಎಲ್ಲರನ್ನೂ ಮನೆಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.