ನವದೆಹಲಿ, ಮೇ 23 (DaijiworldNews/PY) : ವಲಸೆ ಕಾರ್ಮಿಕರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂವಾದ ನಡೆಸಿರುವ ವಿಡಿಯೋವನ್ನು ಶನಿವಾರ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ.
ರಾಹುಲ್ ಗಾಂಧಿ ಅವರು, ಆಗ್ನೇಯ ಭಾರತದಲ್ಲಿರುವ ಸುಖದೇವ್ ವಿಹಾರ್ ಫ್ಲೈಓವರ್ ಸಮೀಪ ಬೀಡುಬಿಟ್ಟಿರುವ ವಲಸೆ ಕಾರ್ಮಿಕರೊಂದಿಗೆ ಸಂವಾದ ನಡೆಸಿರುವ 17 ನಿಮಿಷಗಳ ವಿಡಿಯೊವೊಂದನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದಾರೆ.
ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಿಸುವುದನ್ನು ನಿಯಂತ್ರಿಸಲು ಲಾಕ್ಡೌನ್ ಜಾರಿ ಮಾಡಿದ್ದು, ಈ ನಡುವೆ ತಮ್ಮ ಊರುಗಳಿಗೆ ಹಾಗೂ ಇತರ ರಾಜ್ಯಗಳ ಗ್ರಾಮಗಳಿಗೆ ಹೋಗಲು ಪ್ರಯತ್ನಪಡುತ್ತಿರುವಾಗ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳಲು ರಾಹುಲ್ ಗಾಂಧಿ ವಲಸೆ ಕಾರ್ಮಿಕರೊಂದಿಗೆ ಮಾತನಾಡಿದ್ದರು.
ಈ ಸಂದರ್ಭ, ವಲಸೆ ಕಾರ್ಮಿಕರು ತಮಗೆ ಪ್ರಯಾಣದ ಸೌಕರ್ಯ ಮಾಡಿಕೊಡುವಂತೆ ಮನವಿ ಮಾಡಿದ್ದರು.
ಈ ವಲಸೆ ಕಾರ್ಮಿಕರು ಹರಿಯಾಣದಿಂದ ಉತ್ತರ ಪ್ರದೇಶದ ಝಾನ್ಸಿ ಸಮೀಪದಲ್ಲಿರುವ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ವಾಪಾಸ್ಸಾಗುತ್ತಿದ್ದರು.