ಕಾನ್ಪುರ, ಮೇ 23 (Daijiworld News/MB) : ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟಕ್ಕೊಳಗಾದವರಿಗೆ ದಿನಸಿ ಆಹಾರ ನೀಡುತ್ತಿದ್ದ ಯುವಕ ಆಹಾರ ಪಡೆಯುತ್ತಿದ್ದ ಭಿಕ್ಷುಕಿಯನ್ನೇ ಪ್ರೀತಿಸಿ ವಿವಾಹವಾದ ಸ್ವಾರಸ್ಯಕರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ತನ್ನ ತಂದೆ ತಾಯಿ ನಿಧನರಾದ ಬಳಿಕ ನೀಲಂ ಎಂಬ ಯುವತಿ ಅಣ್ಣ ಹಾಗೂ ಅತ್ತಿಗೆಯೊಂದಿಗೆ ವಾಸಿಸುತ್ತಿದ್ದು ಅವರು ಮನೆಯಿಂದ ಹೊರಹಾಕಿದ್ದರು. ಆ ಬಳಿಕ ಯುವತಿ ಕಾನ್ಪುರದ ಕಾಕದೇವ್ ಪ್ರದೇಶದಲ್ಲಿ ಭಿಕ್ಷುಕರೊಂದಿಗೆ ವಾಸವಾಗಿದ್ದು ಲಾಕ್ಡೌನ್ ಕಾರಣದಿಂದಾಗಿ ಆಹಾರವಿಲ್ಲದೇ ಕಂಗೆಟ್ಟಿದ್ದರು.
ಆಹಾರವಿಲ್ಲದೇ ಹಸಿವಿನಿಂದ ಸಂಕಟಕ್ಕೆ ಒಳಗಾಗಿದ್ದ ಇವರಿಗೆ ಆಹಾರ ತಲುಪಿಸುವಂತೆ ಸ್ಥಳೀಯ ಉದ್ಯಮಿ ಲಾಲತ ಪ್ರಸಾದ್ ಅವರು ತನ್ನ ಚಾಲಕ ಅನಿಲ್ಗೆ ತಿಳಿಸಿದ್ದು ಹಾಗೆ ಕಳೆದ ೪೫ ದಿನಗಳಿಂದ ಪ್ರತಿನಿತ್ಯ ಅನಿಲ್ ಈ ಭಿಕ್ಷುಕರ ಗುಂಪಿಗೆ ಆಹಾರ ತಲುಪಿಸುತ್ತಿದ್ದರು.
ಹೀಗೆ ಪ್ರತಿನಿತ್ಯ ಆಹಾರ ತಲುಪಿಸುತ್ತಿದ್ದಂತೆ ನೀಲಂ ಹಾಗೂ ಅನಿಲ್ ನಡುವೆ ಪ್ರೀತಿ ಬೆಳೆದಿದೆ.
ಇನ್ನು ಇವರ ಪ್ರೀತಿಯ ವಿಷಯ ತಿಳಿದಂತೆ ಅನಿಲ್ ತಂದೆ ನೀಲಂ ಅನಿಲ್ ವಿವಾಹವನ್ನು ಮಾಡಿಯೇ ಬಿಟ್ಟಿದ್ದಾರೆ.