ನವದೆಹಲಿ, ಮೇ 23 (DaijiworldNews/PY) : ಕರ್ನಾಟಕದಲ್ಲಿ ಮೇ 22ರ ಸಂಜೆ 5ರಿಂದ ಮೇ 23ರ ಸಂಜೆ 5ರವರೆಗೆ 216 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 1959ಕ್ಕೆ ಏರಿದೆ.
ಗದಗದಲ್ಲಿ 15, ಯಾದಗಿರಿಯಲ್ಲಿ 72, ಚಿಕ್ಕಬಳ್ಳಾಪುರದಲ್ಲಿ 26, ಕಲಬುರಗಿಯಲ್ಲಿ 1, ರಾಯಚೂರಿನಲ್ಲಿ 40, ದಕ್ಷಿಣ ಕನ್ನಡದಲ್ಲಿ 3, ಹಾಸನದಲ್ಲಿ 4, ಬೆಂಗಳೂರು ನಗರದಲ್ಲಿ 4, ಮಂಡ್ಯದಲ್ಲಿ 28, ದಾವಣಗೆರೆಯಲ್ಲಿ 3, ಕೋಲಾರದಲ್ಲಿ 3, ಬೆಳಗಾವಿಯಲ್ಲಿ 1, ಉತ್ತರ ಕನ್ನಡದಲ್ಲಿ 2, ಧಾರವಾಡದಲ್ಲಿ 5, ಉಡುಪಿಯಲ್ಲಿ 3, ಬಳ್ಳಾರಿಯಲ್ಲಿ3, ಬೀದರ್ನಲ್ಲಿ 3 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮಂಡ್ಯದಲ್ಲಿ1, ಕಲಬುರಗಿಯಲ್ಲಿ 2, ಧಾರವಾಡದಲ್ಲಿ 1 , ದಾವಣಗೆರೆಯಲ್ಲಿ7 ಸೇರಿ ಒಟ್ಟು 11 ಮಂದಿ ಕೊರೊನಾ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 608 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ 1307 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದಾಗಿ ಒಟ್ಟು 42 ಮಂದಿ ಮೃತಪಟ್ಟಿದ್ದಾರೆ.
ಕರ್ನಾಟಕದಲ್ಲಿ ಪತ್ತೆ ಮಾಡಲಾಗಿರುವ 1959 ಪ್ರಕರಣಗಳಲ್ಲಿ 9 ಪ್ರಕರಣಗಳು ಕೇರಳದವರಾಗಿದ್ದು, ಕರ್ನಾಟಕದ ವಿಮಾನ ನಿಲ್ದಾಣಗಳ ಮೂಲಕ ಕೇರಳಕ್ಕೆ ಪ್ರಯಾಣಿಸುತ್ತಿರುವಾಗ ಪತ್ತೆ ಮಾಡಿ, ಅವರಿಗೆ ಕರ್ನಾಟಕದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.