ರಾಯಪುರ, ಮೇ 23 (DaijiworldNews/PY) : ಭದ್ರತಾ ಪಡೆಗಳು ಶನಿವಾರ ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಡೆಸಿದ ಗುಂಡಿನ ದಾಳಿಗೆ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ಮಾವೋವಾದಿ ನಕ್ಸಲರನ್ನು ಮಲಂಗೀರ್ ಪ್ರದೇಶ ಸಮಿತಿಯ ಕಮಾಂಡರ್ ಗುಂಡಾಧುರ್ ಹಾಗೂ ವಿಭಾಗೀಯ ಸಮಿತಿ ಸದಸ್ಯ ವಿನೋದ್ ಎಂದು ಗುರುತಿಸಲಾಗಿದೆ.
ರಾತ್ರಿ 12.45 ಕ್ಕೆ ಮಂಕಪಾಲ್ ಗ್ರಾಮದ ಬಳಿ ಕಾರ್ಯಾಚರಣೆ ಆರಂಭವಾಗಿದ್ದು, ಜಿಲ್ಲಾ ರಿಸರ್ವ ಗಾರ್ಡ್ ತಂಡವು ಗಸ್ತು ಕಾರ್ಯಾಚರಣೆಗೆ ತೆರಳಿದ್ದ ಸಂದರ್ಭ ಮಾವೋವಾದಿಗಳೊಂದಿಗೆ ಗುಂಡಿನ ಕಾಳಗ ನಡೆಯಿತು. ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಗಳು ಇಬ್ಬರು ಮಾವೋವಾದಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮಾಹಾನಿರ್ದೇಶಕ ಡಿ.ಎಂ. ಅವಸ್ಥಿ ಹೇಳಿದ್ದಾರೆ.