ತಿರುವನಂತಪುರಂ, ಮೇ 24 (Daijiworld News/MB) : ಕೊರೊನಾ ಬಳಿಕ ಕೇರಳಕ್ಕೆ ಯಾವುದೇ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ಇಂಡಿಯಾ ಆಯೋಜಿಸಿದ್ದ #AskTheCM ನ ಮೊದಲ ಆವೃತ್ತಿಯಲ್ಲಿ ಮಾತನಾಡಿದ ಅವರು, ಕೇರಳಕ್ಕೆ ವಿದೇಶದಿಂದ ವಾಪಾಸ್ ಆಗುತ್ತಿರುವವರ ಉದ್ಯೋಗದ ಸಮಸ್ಯೆ, ಮುಂದಿನ ಮಳೆಗಾಲದ ಹವಮಾನ ಬದಲಾವಣೆ, ನೈಸರ್ಗಿಕ ವಿಕೋಪ ಸಂಭವನೀಯ ಹಾಗೂ ವಿಕೋಪ ಎದುರಿಸುವಲ್ಲಿ ರಾಜ್ಯದ ತಯಾರಿ, ಕೃಷಿ ಕ್ಷೇತ್ರ ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದು ಈ ಸಂದರ್ಭದಲ್ಲಿ ಕೊರೊನಾ ಬಳಿಕ ಕೇರಳಕ್ಕೆ ಯಾವುದೇ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಕೇರಳ ರಾಜ್ಯವು ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಹೊಸ ರೀತಿಯ ಮಾರ್ಗಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಅಗ್ರ ಸ್ಥಾನದಲ್ಲಿದ್ದು ಈ ಹಿನ್ನಲೆಯಲ್ಲಿ ಕೊರೊನಾ ಬಳಿಕ ಯಾವುದೇ ಬಿಕ್ಕಟ್ಟು ಎದುರಿಸಿ ಜಯಿಸಲು ಕೇರಳಕ್ಕೆ ಸಾಧ್ಯ ಎಂದು ಹೇಳಿದ್ದಾರೆ.