ಚಿಕ್ಕಬಳ್ಳಾಪುರ, ಮೇ 24 (DaijiworldNews/PY) : ಡಿಕೆಶಿ ಅವರಿಗೆ ಹೃದಯ ಇದೆಯಾ? ಬಿಎಸ್ವೈ ಅವರಿಗೆ ಇಲ್ಲವೇ? ಹೃದಯ ಇಲ್ಲದೇ ಇರುತ್ತಿದ್ದರೆ ಹೋಗುತ್ತಿರುವ ಎಲ್ಲರಿಗೂ ಫ್ರೀಯಾಗಿ ಕಳಿಸ್ತಾ ಇದ್ದರಾ? ಎಂದು ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಡಿಕೆಶಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹೃದಯವಂತಿಕೆ ಇದ್ದರೆ ರಾಜ್ಯದ ಜನರಿಗೆ ಕಾಂಗ್ರೆಸ್ನಿಂದ ಒಂದು ತಿಂಗಳ ಕಾಲ ಸಾಮಾಗ್ರಿಗಳನ್ನು ನೀಡಲಿ, ನಾನು ಅದನ್ನು ಸ್ವಾಗತಿಸುತ್ತೇನೆ. ಬಾಯಿ ಚಪಲಕ್ಕಾಗಿ ಏನೋ ಒಂದು ಮಾತನಾಡುವುದಲ್ಲ. ರಾಜ್ಯಕ್ಕೆ ಒಂದು ತಿಂಗಳ ದವಸ -ಧಾನ್ಯ ನೀಡಲಿ ಎಂದರು.
ಡಿ.ಕೆ.ಶಿವಕುಮಾರ್ ಅವರಿಗೆ ಹೃದಯ ಇದೆಯಾ? ಬಿಎಸ್ವೈ ಅವರಿಗೆ ಹೃದಯ ಇಲ್ಲವಾ? ಬಿಎಸ್ವೈ ಅವರಿಗೆ ಹೃದಯ ಇಲ್ಲದೇ ಇರುತ್ತಿದ್ದರೆ ಹೋಗುತ್ತಿರುವ ಎಲ್ಲರಿಗೂ ಫ್ರೀಯಾಗಿ ಕಳಿಸ್ತಾ ಇದ್ರಾ?, ಟ್ಯಾಕ್ಸಿ ಚಾಲಕರಿಗೆ, ಅಡುಗೆ ಸಾಮಗ್ರಿ, ಉಚಿತ ಊಟ, ವಸತಿಗೆ ಐದು ಸಾವಿರ ಕೊಟ್ಟಿದ್ದು ಯಾರು? ಶ್ರೀಮತಿ ಸೋನಿಯಾ ಗಾಂಧಿ ಅವರು ನೀಡಿದರಾ? ಪ್ರತಿಪಕ್ಷದ ಅಧ್ಯಕ್ಷರಾಗಿ ಏನೋ ಹೇಳಬೇಕು ಅಂತ ಇರುತ್ತದೆ ಹಾಗೇ ಹೇಳುತ್ತನೇ ಇರುತ್ತಾರೆ. ಹೇಳಿಕೆಗಳಿಗೂ ಒಂದು ಮಿತಿ ಬೇಕು ಎಂದರು.
ಕೊರೊನಾದ ಬಗ್ಗೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನಾಲ್ಕು ತಿಂಗಳಲ್ಲಿ ಇಷ್ಟೊಂದು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಎಲ್ಲಾ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರು. ಕೆಲವು ರಾಜ್ಯಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರೆ ಕೊರೊನಾ ಪಟ್ಟಿಯಲ್ಲಿ ತೋರಿಸುತ್ತಿಲ್ಲ. ಎಲ್ಲವನ್ನೂ ನಾವು ಅಂಕಿ-ಅಂಶಗಳ ಮೂಲಕ ನೀಡುವ ಕಾರಣ ಸಾವಿನ ಸಂಖ್ಯೆ ಜಾಸ್ತಿ ಕಾಣಿಸುತ್ತದೆ. ಒಟ್ಟು 598 ಗುಣಮುಖರಾಗಿದ್ದು, 42 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.