ಮುಂಬೈ, ಮೇ 24 (DaijiworldNews/PY) : ಮಹಾರಾಷ್ಟ್ರದಲ್ಲಿ ಕೆಂಪು ವಲಯಗಳಲ್ಲಿರುವ ವಿಮಾನ ನಿಲ್ದಾಣಗಳ ಕಾರ್ಯಾಚರಿಸುವುದಿಲ್ಲ ಎಂದು ಭಾನುವಾರ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.
ಸೋಮವಾರದಿಂದ ದೇಶೀಯ ವಿಮಾನ ಸಂಚಾರ ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಸ್ಪಷ್ಟನೆಯನ್ನು ನೀಡಿದ್ದು, ವಿಮಾನ ನಿಲ್ದಾಣಗಳು ಕೆಂಪು ವಲಯಗಳಲ್ಲಿ ಮಾಡಬೇಕು ಎಂದು ಸಲಹೆ ನೀಡುವುದು ಸಾಧುವಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ತಿಳಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಆಟೊ, ಟ್ಯಾಕ್ಸಿ, ಬಸ್ ಓಡಾಟ ಕಷ್ಟ. ಓರ್ವ ಸೋಂಕಿತ ಪ್ರಯಾಣಿಕನಿದ್ದರೂ ಕೆಂಪು ವಲಯಗಳ ಒತ್ತಡ ಇನ್ನಷ್ಟು ಜಾಸ್ತಿಯಾಗಲಿವೆ. ಕೆಂಪು ವಲಯಗಳಿಂದ ಪ್ರಯಾಣಿಕರನ್ನು ಹಸಿರು ವಲಯಗಳಿಗೆ ಕರೆತರುವುದು ಅಪಾಯ. ಹಾಗೆ ಮಾಡಬಾರದು ಎಂದು ಹೇಳಿದ್ದಾರೆ.
ಪುಣೆ, ನಾಗ್ಪುರದಲ್ಲಿರುವ ವಿಮಾನ ನಿಲ್ದಾಣಗಳು ಹಾಗೂ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೆಂಪು ವಲಯಗಳಲ್ಲಿ ಬರುತ್ತವೆ.