ಇಂದೋರ್, ಮೇ 24 (DaijiworldNews/PY) : ಕೇಂದ್ರದ ವಂದೇ ಭಾರತ್ ಮಿಷನ್ ಕಾರ್ಯಾಚರಣೆಯಡಿ ಏರ್ ಇಂಡಿಯಾ ವಿಮಾನ ಇಂಗ್ಲೇಂಡ್ನಲ್ಲಿದ್ದ 93 ಭಾರತೀಯರನ್ನು ಭಾನುವಾರ ಬೆಳಿಗ್ಗೆ ಮಧ್ಯಪ್ರದೇಶದ ಇಂದೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿದೆ.
ಲಂಡನ್ನಿಂದ ಹೊರಟ ಏರ್ ಇಂಡಿಯಾ ವಿಮಾನ ಇಂದು ಬೆಳಿಗ್ಗೆ 8.04 ಕ್ಕೆ ಇಂದೋರ್ಗೆ ಬಂದು ತಲುಪಿದ್ದು, ಇಂಗ್ಲೇಂಡ್ನಿಂದ ಆಗಮಿಸಿದ ವಿಶೇಷ ವಿಮಾನವು 93 ಭಾರತೀಯರನ್ನು ಕರೆತಂದಿದೆ ಎಂದು ಇಂದೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕಿ ಆರ್ಯಮಾ ಸನ್ಯಾಲ್ ತಿಳಿಸಿದ್ದಾರೆ.
ಭಾರತಕ್ಕೆ ಇಂಗ್ಲೇಂಡ್ನಿಂದ ವಾಪಾಸ್ಸಾದವರನ್ನು ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಅವರ ವಸ್ತುಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.