ಚಿಕ್ಕಮಗಳೂರು, ಮೇ 24 (Daijiworld News/MB) : ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಪ್ರತ್ಯೇಕ ನಿಗಾ ವಾರ್ಡ್ನಲ್ಲಿದ್ದ ವ್ಯಕ್ತಿ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
53 ವರ್ಷದ ಕೊಪ್ಪ ತಾಲೂಕಿನ ಈ ವ್ಯಕ್ತಿಗೆ ಜ್ವರ, ಕೆಮ್ಮು ಲಕ್ಷಣಗಳಿದ್ದ ಹಿನ್ನಲೆಯಲ್ಲಿ ಆತನನ್ನು ಕೋವಿಡ್ ನಿಗಾ ಕೇಂದ್ರಕ್ಕೆ ಕರೆ ತರಲಾಗಿತ್ತು. ಮೇ 20ರಂದು ಪ್ರತ್ಯೇಕ ನಿಗಾ ವಾರ್ಡ್ಗೆ ವರ್ಗಾಯಿಸಲಾಗಿದ್ದು ಈ ವ್ಯಕ್ತಿಯ ಗಂಟಲ ದ್ರವ, ಮೂಗಿನ ದ್ರವ ಪರೀಕ್ಷೆ ವರದಿ ಬಂದಿದ್ದು ಸೋಂಕು ದೃಢಪಟ್ಟಿರಲಿಲ್ಲ.
ವೈದ್ಯರು ಭಾನುವಾರ ಬೆಳಿಗ್ಗೆ ತಪಾಸಣೆಗೆಂದು ವಾರ್ಡ್ಗೆ ತೆರಳಿದಾಗ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು ಮೂಲವ್ಯಾಧಿ ಇದ್ದ ಕಾರಣದಿಂದಾಗಿ ಚಿಕಿತ್ಸೆ ನೀಡಲಾಗುತ್ತಿತ್ತು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ.