ಬೆಂಗಳೂರು, ಮೇ 24 (DaijiworldNews/PY) : ರಾಜ್ಯದಲ್ಲಿ ಮೇ 23ರ ಸಂಜೆ 5ರಿಂದ ಮೇ 24ರ ಮಧ್ಯಾಹ್ನ 12ರ ವರೆಗೂ 97 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಸೋಂಕಿತರ ಸಂಖ್ಯೆ 2,056ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ 26, ಉಡುಪಿಯಲ್ಲಿ 18, ದಾವಣಗೆರೆಯಲ್ಲಿ 4, ಕಲಬುರಗಿಯಲ್ಲಿ 6, ತುಮಕೂರಿನಲ್ಲಿ 2, ಯಾದಗಿರಿಯಲ್ಲಿ 6, ಹಾಸನದಲ್ಲಿ 14, ಧಾರವಾಡದಲ್ಲಿ 2, ಕೊಡಗಿನಲ್ಲಿ 1, ಮಂಡ್ಯದಲ್ಲಿ 15, ವಿಜಯಪುರದಲ್ಲಿ 1, ಉತ್ತರ ಕನ್ನಡದಲ್ಲಿ 2, ದಕ್ಷಿಣ ಕನ್ನಡದಲ್ಲಿ 1 ದಾವಣಗೆರೆ 18, ಚಿತ್ರದುರ್ಗ 4, ಬಾಗಲಕೋಟೆ 3, ಹಾವೇರಿ 1 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದೆ.
ಒಟ್ಟು 26 ಮಂದಿ ಕೊರೊನಾ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ ಒಟ್ಟು 634 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ 1378 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದಾಗಿ ಒಟ್ಟು 42 ಮಂದಿ ಸಾವನ್ನಪ್ಪಿದ್ದಾರೆ.