ನವದೆಹಲಿ, ಮೇ 24 (DaijiworldNews/PY) : ವಿಶೇಷ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಮೇ 25 ಹಾಗೂ 26 ರಂದು ತಿಹಾರ್ ಜೈಲು ಆವರಣದಲ್ಲಿ ಮೈಕೆಲ್ ಅವರನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಶನಿವಾರ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ತಿಹಾರ್ ಜೈಲಿನಲ್ಲಿರುವ, ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಫ್ಟರ್ ಖರೀದಿ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಅವರ ವಿಚಾರಣೆ ಮಾಡಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದೆ.
ಮೈಕಲ್ ಲಂಚ ಪಡೆದುಕೊಂಡಿದ್ದಾರೆ ಎಂದು 2016ರ ಜೂನ್ ತಿಂಗಳಲ್ಲಿ ಇ.ಡಿ ಆರೋಪ ಪಟ್ಟಿ ದಾಖಲಿಸಿತ್ತು. 2018ರ ಡಿಸೆಂಬರ್ 4ರಂದು ಸಂಯುಕ್ತ ಅರಬ್ ಒಕ್ಕೂಟ ಮೈಕೆಲ್ ಅವರನ್ನು ಭಾರತಕ್ಕೆ ಗಡಿಪಾರು ಮಾಡಿತ್ತು.
ಯುಪಿಎ ಅವಧಿಯ ಸಂದರ್ಭ ಗಣ್ಯರ ಬಳಕೆಯ ಹೆಲಿಕಾಫ್ಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ 3,600 ಕೋಟಿ ರೂ ಮೊತ್ತದ ಹಗರಣದಲ್ಲಿ ಮೈಕಲ್ ಅವರು ಭಾರತಕ್ಕೆ ಬೇಕಾಗಿದ್ದರು.