ಶ್ರೀನಗರ, ಮೇ 24 (DaijiworldNews/PY) : ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಲಷ್ಕರ್ ಇ - ತಾಯ್ಬಾ ಉಗ್ರಗಾಮಿ ಸಂಘಟನೆಯೊಂದಿಗೆ ಸಹಚರ್ಯ ಹೊಂದಿದ್ದ ನಾಲ್ವರನ್ನು ಭಾನುವಾರ ಭದ್ರತಾ ಪಡೆಯ ಯೋಧರು ಬಂಧಿಸಿದ್ದಾರೆ.
ಬಂಧಿತರನ್ನು ಅಜರುದ್ದೀನ್ ಮಿರ್, ಫಾರೂಕ್ ಅಹ್ಮದ್ ದಾರ್, ಮೊಹಮ್ಮದ್ ಯಾಸಿನ್ ಹಾಗೂ ವಸೀಮ್ ಗಣಿ ಎಂದು ಗುರುತಿಸಲಾಗಿದೆ. ಈ ನಾಲ್ವರು ಲಷ್ಕರ್ ಇ - ತಾಯ್ಬಾ ಉಗ್ರಗಾಮಿ ಸಂಘಟನೆಯ ಉಗ್ರರಿಗೆ ತಾತ್ವಿಕ ನೆರವು ಹಾಗೂ ಆಶ್ರಯ ನೀಡುತ್ತಿದ್ದರು ಎಂಬುದಾಗಿ ಪೊಲೀಸ್ ದಾಖಲೆಗಳು ತಿಳಿಸಿವೆ.
ಈ ನಾಲ್ವರನ್ನು ಬದ್ಗಾಮ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿ ಅವರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.