ಶಿರಸಿ, ಮೇ 24 (Daijiworld News/MB) : ಕೊರೊನಾ ಬಾರದಂತೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ರಾಮನಬೈಲ್ನಲ್ಲಿ ತಂದೆ ಹಾಗೂ ಪುತ್ರ ಬೇರೊಂದನ್ನು ಅರೆದು ಕಷಾಯ ಕುಡಿದಿದ್ದು ಮಗ ಸಾವನ್ನಪ್ಪಿದ್ದರೆ ತಂದೆ ಸ್ಥಿತಿ ಗಂಭೀರವಾಗಿದೆ.
ಮೃತರನ್ನು ಪ್ರಾನ್ಸಿಸ್ ರೇಗೊ(42) ಎಂದು ಗುರುತಿಸಲಾಗಿದ್ದು ತಂದೆ 70 ವರ್ಷದ ನೆಕ್ಲಾಂ ಅಂಥೋನಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ.
ಕೊರೊನಾ ತಡೆಗಟ್ಟ ಬೇಕಾದರೆ ಆರೋಗ್ಯಕರವಾಗಿರಬೇಕು. ಆರೋಗ್ಯಕ್ಕೆ ಗಿಡಮೂಲಿಕೆ ಕಷಾಯ ಮಾಡಿ ಕುಡಿಯಬೇಕು ಎಂದು ಯಾರೋ ಹೇಳಿದ ಕಾರಣಕ್ಕೆ ಇಬ್ಬರು ಕಷಾಯ ಮಾಡಿ ಕುಡಿದಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಸಿಪಿಐ ಪ್ರದೀಪ್, ಅವರು ಕಷಾಯ ಮಾಡಿ ಕುಡಿದ ಬೇರನ್ನು ಸಂಗ್ರಹ ಮಾಡಲಾಗಿದ್ದು ಅದು ಯಾವ ಬೇರು ಎಂದು ಪತ್ತೆಹಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.