ನವದೆಹಲಿ, ಮೇ 25 (Daijiworld News/MB) : ಚೀನಾ ಭಾರತೀಯ ಯೋಧರನ್ನು ಲಡಾಕ್ನ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಸಮೀಪದಲ್ಲಿ ವಶ ಪಡೆಸಿಕೊಂಡಿದೆ ಎಂದು ವರದಿಗಳು ಆಗುತ್ತಿದ್ದು ಇದನ್ನು ಭಾರತೀಯ ಸೇನೆ ಅಲ್ಲಗಳೆದಿದೆ.
ಈ ಕುರಿತಾಗಿ ಸೇನಾ ವಕ್ತಾರ ಕರ್ನಲ್ ಅಮನ್ ಆನಂದ್ ಅವರು ಸ್ಪಷ್ಟನೆ ನೀಡಿದ್ದು "ಭಾರತೀಯ ಯೋಧರನ್ನು ಗಡಿಯಲ್ಲಿ ಚೀನಾ ವಶಕ್ಕೆ ಪಡೆದಿಲ್ಲ. ಮಾಧ್ಯಮಗಳು ಯಾವುದೇ ಆದಾರವಿಲ್ಲದ ವರದಿಗಳನ್ನು ಪ್ರಕಟ ಮಾಡಿರುವುದು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತಂದಿದೆ" ಎಂದು ತಿಳಿಸಿದ್ದಾರೆ.
ಕಳೆದ ವಾರದಲ್ಲಿ ಚೀನಾ ಭಾರತೀಯ ಯೋಧರನ್ನು ವಶಕ್ಕೆ ಪಡೆದಿದ್ದು ಬಳಿಕ ಬಿಡುಗಡೆ ಮಾಡಿದೆ ಎಂದು ಹಲವು ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಸೇನೆ ಚೀನಾ ಭಾರತೀಯ ಯೋಧರನ್ನು ವಶಕ್ಕೆ ಪಡೆದಿಲ್ಲ ಎಂದು ತಿಳಿಸಿದೆ.
ಭಾರತ ಚೀನಾ ಗಡಿ ಪ್ರದೇಶದಲ್ಲಿ ಎರಡು ದೇಶಗಳ ಸೇನೆಗಳ ನಡುವೆ ಘರ್ಷಣೆ ಉಂಟಾಗಿ ಯೋಧರಿಗೆ ಗಾಯಗೊಂಡಿದ್ದಾರೆ ಎಂದು ಈ ಮೊದಲು ವರದಿಯಾಗಿದೆ.