ನವದೆಹಲಿ, ಮೇ 25 (Daijiworld News/MSP): ಪಶ್ಚಿಮ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಕೇರಳ ಮೂಲಕ ನರ್ಸ್ ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ. ಕೇರಳ ಮೂಲದ ಈಕೆ ಪಶ್ಚಿಮ ದೆಹಲಿಯ ಕೀರ್ತಿನಗರದಲ್ಲಿರುವ ಕಾರ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ ಕೆಲ ದಿನಗಳಿಂದ ನರ್ಸ್ ಕೆಲಸಕ್ಕೆ ಬರುತ್ತಿರಲಿಲ್ಲ, ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಯೂ ನರ್ಸ್ ಬಗ್ಗೆ ವಿಚಾರಿಸಿದಾಗ ಆಕೆ ಕೊರೊನಾಗೆ ಬಲಿಯಾಗಿರುವುದು ತಿಳಿದು ಬಂದಿದೆ.
ಆಸ್ಪತ್ರೆಯ ಹೊರಗಿನ ಕ್ಲಿನಿಕ್ ನಲ್ಲಿ ರೋಗಿಗಳನ್ನು ಪರೀಕ್ಷಿಸಲಾಗುತ್ತದೆ ಹಾಗೂ ಜ್ವರವಿಲ್ಲದವರಿಗೆ ಮಾತ್ರ ಆಸ್ಪತ್ರೆ ಪ್ರವೇಶಿಸಲು ಅವಕಾಶವಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇನ್ನೂ ನರ್ಸ್ ನಿಧನಕ್ಕೆ ಕೇರಳ ನರ್ಸ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ.