ಮುಂಬೈ, ಮೇ 25 (Daijiworld News/MB) : ಮಹಾರಾಷ್ಟ್ರ ಸಚಿವ, ಕಾಂಗ್ರೆಸ್ನ ಹಿರಿಯ ಮುಖಂಡರೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು, ಸಚಿವರು ಮುಂಬೈ ಮತ್ತು ತಮ್ಮ ಮರಾಠವಾದ ನಡುವೆ ಹೆಚ್ಚಾಗಿ ಪ್ರಯಾಣ ಮಾಡಿದ್ದು ಕೆಲವು ದಿನಗಳ ಹಿಂದೆ ಅವರಿಗೆ ಸೋಂಕು ದೃಢಪಟ್ಟಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಮೊದಲು ಎನ್ಸಿಪಿ ಮುಖಂಡ, ವಸತಿ ಸಚಿವ ಜಿತೇಂದ್ರ ಅವದ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆಸ್ಪತ್ರೆಯಲ್ಲಿ 2 ವಾರಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇದೀಗ ಮತ್ತೋರ್ವ ಸಚಿವರಿಗೆ ಕೊರೊನಾ ದೃಢಪಟ್ಟಿರುವ ಕಾರಣ ಮಹಾರಾಷ್ಟ್ರದಲ್ಲಿ ಇಬ್ಬರು ಸಚಿವರಿಗೆ ಕೊರೊನಾ ದೃಢಪಟ್ಟಿದೆ.