ಮುಂಬೈ, ಮೇ 25 (DaijiworldNews/PY) : ಒಮ್ಮೆಲೆ ಲಾಕ್ಡೌನ್ ಜಾರಿಗೊಳಿಸಿದ್ದು ತಪ್ಪು. ಅಲ್ಲದೇ, ತಕ್ಷಣವೇ ತೆರವುಗೊಳಿಸುವುದರಿಂದ ಅಂತಿಮವಾಗಿ ಜನರ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಜಾಸ್ತಿಯಾಗುತ್ತಲೇ ಇವೆ. ಅಲ್ಲದೇ, ಮುಂದಿನ ತಿಂಗಳು ಮುಂಗಾರು ಆರಂಭವಾಗಲಿರುವ ಕಾರಣ ಜನರು ಇನ್ನಷ್ಟೂ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದರು.
ಏಕಾಏಕಿ ಲಾಕ್ಡೌನ್ ಜಾರಿಗೊಳಿಸಿದ್ದು ತಪ್ಪು. ಅದೇ ರೀತಿ ಅದನ್ನು ಈಗ ತೆರವುಗೊಳಿಸಲೂ ಆಗುವುದಿಲ್ಲ ಎಂದು ತಿಳಿಸಿದರು.
ಕೆಲ ದಿನಗಳವರೆಗೆ ಪಿಪಿಇ ಕಿಟ್ ಹಾಗೂ ಇತರ ವೈದ್ಯಕೀಯ ಉಪಕರಣಗಳ ಕೊರತೆ ಇತ್ತು. ಇದೀಗ ಔಷಧಿಗಳ ಕೊರತೆ. ವಲಸೆ ಕಾರ್ಮಿಕರನ್ನು ರೈಲುಗಳ ಮೂಲಕ ಅವರ ಊರಿಗೆ ಕಳುಹಿಸುವುದ್ದಕ್ಕೆ ತಗುಲಿದ ವೆಚ್ಚದ ಪೈಕಿ ಕೇಂದ್ರದ ಪಾಲು ಸಹ ಬಂದಿಲ್ಲ. ಜಿಎಸ್ಟಿಗೆ ಸಂಬಂಧಪಟ್ಟಂತೆ ರಾಜ್ಯದ ಪಾಲು ಇನ್ನೂ ಪಾವತಿಯಾಗಿಲ್ಲ ಎಂದು ತಿಳಿಸಿದರು.