ಗಂಗಾವತಿ, ಮೇ 25 (Daijiworld News/MB) : ತಾಲೂಕಿನ ಜಂಗ್ಲಿ ರಂಗಾಪೂರ ಗ್ರಾಮದಲ್ಲಿರುವ ಜಂಗಲ್ ಟ್ರೀ ರೆಸಾರ್ಟ್ ಆರಂಭ ಮಾಡಲಾಗಿದ್ದು ರೆಸಾರ್ಟ್ಗೆ ಬೆಂಗಳೂರು ಹೈದರಾಬಾದ್ನಿಂದ ಟೆಕ್ಕಿಗಳು ಕಳೆದ ಶುಕ್ರವಾರ ರಾತ್ರಿ ಆಗಮಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಜಂಗ್ಲಿ ರಂಗಾಪೂರ ಗ್ರಾಮದ ಸ್ಥಳೀಯರು ರೆಸಾರ್ಟ್ ಮಾಲಿಕರು ಹಾಗೂ ರೆಸಾರ್ಟ್ನಲ್ಲಿದ್ದ ಟೆಕ್ಕಿಗಳನ್ನು ಹೊರ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರು ಕೂಡಾ ರೆಸಾರ್ಟ್ ಆರಂಭ ಮಾಡಿರುವುದ್ದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ಅದರಿಂದಾಗಿ ನಮಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಅವರನ್ನು ಈ ಕೂಡಲೇ ಕ್ವಾರಂಟೈನ್ಗೆ ಒಳಪಡಿಸಬೇಕು. ರೆಸಾರ್ಟ್ ತೆರೆದು ಪ್ರವಾಸಿಗರಿಗೆ ಉಳಿಯಲು ಅವಕಾಶ ಮಾಡಿಕೊಟ್ಟ ರೆಸಾರ್ಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಪೊಲೀಸರು ಆಗಮಿಸಿ ಸಮಾಧಾನಪಡಿಸಿದ್ದಾರೆ ಎಂದು ವರದಿಯಾಗಿದೆ.