ನವದೆಹಲಿ, ಮೇ 25 (DaijiworldNews/PY) : ಮುಂದಿನ 10 ದಿನಗಳವರೆಗೆ ಮಾತ್ರ ಮಧ್ಯದ ಸೀಟ್ಗಳನ್ನು ಭರ್ತಿ ಮಾಡಿಕೊಂಡು ಹಾರಾಟ ನಡೆಸಬಹುದು. ತದನಂತರದಲ್ಲಿ ಮಧ್ಯದ ಸೀಟ್ಗಳನ್ನು ಖಾಲಿ ಬಿಟ್ಟು ವಿಮಾನದೊಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.
ಕೊರೊನಾ ವಿರುದ್ದದ ಹೋರಾಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ಇದು ಎಲ್ಲರಲ್ಲೂ ಇರಬೇಕಾಗಿರುವ ಸಾಮಾನ್ಯ ಜ್ಞಾನವಾಗಿದೆ. ಹಾಗಾಗಿ, ಭಾರತೀಯರನ್ನು ವಿದೇಶಗಳಿಂದ ವಿಶೇಷ ವಿಮಾನಗಳ ಮೂಲಕ ಕರೆತರುವಾಗ ಮಧ್ಯದ ಸೀಟ್ಗಳನ್ನು ಖಾಲಿ ಬಿಡಬೇಕು ಎಂದು ತಿಳಿಸಿದೆ.
ಸರ್ಕಾರದ ಪರವಾಗಿ ಸ್ಯಾನಿಟೈಸರ್ ಜನರಲ್ ತುಷಾರ್ ಮೆಹ್ತಾ ಕೊರೊನಾ ವ್ಯಾಪಿಸದಂತೆ ನಿಯಂತ್ರಿಸಲು ಪರೀಕ್ಷೆ ಮಾಡಿಸಿಕೊಳ್ಳಬೇಕು ಅಥವಾ ಕ್ವಾರಂಟೈನ್ನಲ್ಲಿ ಇರಬೇಕು. ಆದರೆ, ಅದನ್ನು ಹೊರತುಪಡಿಸಿ ಸೀಟುಗಳನ್ನು ಖಾಲಿ ಬಿಡುವುದು ಅಲ್ಲ ಎಂದು ವಾದ ಮಂಡಿಸಿದರು. ಅಲ್ಲದೇ, ತಜ್ಞರ ಸೂಚನೆಗಳ ಅನ್ವಯ ವಿಮಾನಗಳ ಹಾರಾಟ ನಡೆಯತ್ತಿವೆ. ಬಳಿಕ ಸರ್ಕಾರದ ವಾದವನ್ನು ಒಪ್ಪದ ಮುಖ್ಯ ನ್ಯಾಯಮೂರ್ತಿಗಳು ಸಾಮಾಜಿಕ ಅಂತರವನ್ನು ವಿಮಾನದೊಳಗೂ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ದೇಶೀಯ ವಿಮಾನ ಹಾರಾಟ ಇಂದುನಿಂದು ಪ್ರಾರಂಭವಾಗಿದ್ದು, ವಿಮಾನದಲ್ಲಿ ಮಧ್ಯದ ಸೀಟ್ಗಳನ್ನು ಭರ್ತಿ ಮಾಡಿಕೊಂಡು ಹಾರಾಟ ನಡೆಸುತ್ತಿವೆ. ಹಾಗಾಗಿ ಸೋಮವಾರ ಸುಪ್ರೀ ನೀಡಿರುವ ಸೂಚನೆಯು, ದೇಶೀಯ ವಿಮಾನಗಳ ಹಾರಾಟದ ಮೇಲೆಯೂ ಪರಿಣಾಮ ಬೀರಬಹುದಾಗಿದೆ.