ಬೆಂಗಳೂರು, ಮೇ 25(Daijiworld News/MSP):: ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಪೊಲೀಸ್ ಕಾನ್ಸ್ಟೇಬಲ್ ಗೆ ಕೊವೀಡ್ - 19 ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ವಚ್ಛತೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇನ್ನಷ್ಟು ಆದ್ಯತೆ ಕೊಡಲು ಮುಂದಾಗಿದ್ದಾರೆ.
ಹೌದು, ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಸಂಚಾರ ಅನಿವಾರ್ಯ. ಕೊರೊನಾ ಸಾಂಕ್ರಮಿಕ ರೋಗದ ಸಂಕಷ್ಟದಲ್ಲಿ ಸ್ವಚ್ಛತೆ ಕಡೆಗೆ ಹೆಚ್ಚಿನ ಒತ್ತುಕೊಡಬೇಕಾಗಿರುವುದರಿಂದ ಪೊಲೀಸ್ ಠಾಣೆಗಳಿಗೆ ವಾಷಿಂಗ್ ಮಿಷನ್ ಅಳವಡಿಸಲು ಇಲಾಖೆ ಮುಂದಾಗಿದೆ.
ಠಾಣೆಯ ಸಿಬ್ಬಂದಿಗಳ ಸಮವಸ್ತ್ರ, ಕರವಸ್ತ್ರ ಸೇರಿದಂತೆ ತಮ್ಮ ಬಟ್ಟೆಬರೆಗಳನ್ನು ಸ್ವಚ್ಛ ವಾಗಿಡಲು ವಾಷಿಂಗ್ ಮಷಿನ್ ಕೊಡಲು ಚಿಂತನೆ ನಡೆಸಿದೆ.
ಪೊಲೀಸರ ಆರೋಗ್ಯದ ದೃಷ್ಟಿಯಿಂದ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಪ್ರಾಯೋಗಿಕವಾಗಿ ಎರಡು ಪೊಲೀಸ್ ಠಾಣೆಗೆ ವಾಷಿಂಗ್ ಮೆಷಿನ್ ನೀಡಲು ಚಿಂತನೆ ನಡೆಸಿದೆ ಎಂದು ಕಮೀಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಡ್ಯೂಟಿ ಮುಗಿಸಿದ ಬಳಿಕ ಪೊಲೀಸ್ ಸಿಬ್ಬಂದಿಗಳು ತಮ್ಮ ಮನೆಗೆ ಹೋಗುತ್ತಾರೆ. ಅದಕ್ಕಿಂತ ಠಾಣೆಯಲ್ಲಿ ಸಮವಸ್ತ್ರ ಸ್ವಚ್ಛತೆ ಮಾಡಿಕೊಂಡರೆ ಹಾಗೂ ಬಿಸಿನೀರಿನಲ್ಲಿ ಬಟ್ಟೆ ಸ್ವಚ್ಛತೆ ಮಾಡಲು ಬೇಕಾದ ಬಟ್ಟೆ ಒಗೆಯುವ ಯಂತ್ರ ಅಳವಡಿಸಿದರೆ ಸ್ವಚ್ಚತೆ ಸಾಧ್ಯವಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಠಾಣೆಗಳಿಗೆ ವಾಷಿಂಗ್ ಮೆಷಿನ್ ಕೊಡಲು ಸಿದ್ಧತೆ ನಡೆಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.