ಬೆಂಗಳೂರು, ಮೇ 25 (DaijiworldNews/PY) : ನಮ್ಮ ಕೊರೊನಾ ಯೋಧರ ಪರಿಶ್ರಮಕ್ಕೆ ಹೆಮ್ಮೆಯ ಅನುಮೋದನೆ ದೊರಕಿದೆ. ಕೋವಿಡ್-19ನ ಪರಿಣಾಮಕಾರಿ ನಿರ್ವಹಣೆಗಾಗಿ 4 ಮಾದರಿ ನಗರಗಳನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಇವುಗಳಲ್ಲಿ ಬೆಂಗಳೂರು ನಗರ ಸೇರಿರುವುದಕ್ಕೆ ಸಿಎಂ ಬಿಎಸ್ವೈ ಅವರು ಕೊರನಾ ವಾರಿಯರ್ಸ್ ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮ ಕೊರೊನಾ ಯೋಧರ ಪರಿಶ್ರಮಕ್ಕೆ ಹೆಮ್ಮೆಯ ಅನುಮೋದನೆ ದೊರಕಿದೆ. ಕೊರೊನಾ ಪರಿಣಾಮಕಾರಿ ನಿರ್ವಹಣೆಗಾಗಿ 4 ಮಾದರಿ ನಗರಗಳನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಉತ್ತಮ ಚಿಕಿತ್ಸೆ ಹಾಗೂ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ನಮ್ಮ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ನಮ್ಮ ಇಡೀ ತಂಡಕ್ಕೆ ಅಭಿನಂದನೆಗಳು. ಈ ಉತ್ತಮ ಸೇವೆಯನ್ನು ಮುಂದುವರಿಸೋಣ ಎಂದು ಬರೆದಿದ್ದಾರೆ.
ಕೆಂದ್ರ ಸರ್ಕಾರವು ಆಯೋಜಿಸಿದ್ದ ಸಭೆಯಲ್ಲಿ, ಜೈಪುರ ಹಾಗೂ ಇಂದೋರ್ ಮೆಟ್ರೋಪಾಲಿಟನ್ ನಗರಗಳು ಹೆಚ್ಚಿನ ಕೊರೊನಾ ಪ್ರಕರಣಗಳನ್ನು ನಿಭಾಯಿಸಲು ಕಂಡುಕೊಂಡ ಮಾರ್ಗಗಳು ಹಾಗೂ ಚೆನ್ನೈ ಮತ್ತು ಬೆಂಗಳೂರಿನಂತಹ ದೊಡ್ಡ ನಗರಗಳು ಪರಣದ ಪ್ರಭಾವವನ್ನು ಕಡಿಮೆ ಮಾಡಲು ತೆಗೆದುಕೊಂಡಿರುವಂತಹ ವಿಧಾನಗಳಿಗಾಗಿ ಮಾದರಿ ನಗರಗಳೆಂದು ಗುರುತಿಸಲಾಗಿತ್ತು.
ಕೆಲವು ದಿನಗಳ ಹಿಂದೆ ಕೊರೊನಾ ನಿರ್ವಹಣೆಯ ಬಗ್ಗೆ ಎರಡು ಪ್ರಮುಖ ವಿಚಾರಗಳಾದ ಹೆಚ್ಚಿನ ಜನಸಂಖ್ಯೆಯ ಸಕಾರಾತ್ಮಕ ಪ್ರಕರಣಗಳನ್ನು ನಿರ್ವಹಣೆ ಮಾಡುವಲ್ಲಿ ಹಾಗೂ ಮರಣದ ಪ್ರಮಾಣವನ್ನು ಕಡಿಮೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳುವ ಸಲುವಾಗಿ ಕೇಂದ್ರವು ವಿವಿಧ ಪುರಸಭೆಗಳ ನಡುವೆ ಸಭೆಯನ್ನು ಆಯೋಜನೆ ಮಾಡಿತ್ತು.