ನವದೆಹಲಿ, ಮೇ 25 (DaijiworldNews/PY) : ರಾಜ್ಯದಲ್ಲಿ ಇಂದು 93 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 2182ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರ 8, ಉಡುಪಿ 32, ಮಂಡ್ಯ 2, ಬೆಳಗಾವಿ 1, ದಕ್ಷಿಣ ಕನ್ನಡ 4, ಯಾದಗಿರಿ 15, ಬೀದರ್ 1, ಕೋಲಾರ 2, ರಾಮನಗರ 1, ತುಮಕೂರು 1, ವಿಜಯಪುರ 1, ಕೋಲಾರ 2, ಕಲಬುರಗಿ 16, ಬಳ್ಳಾರಿ 3, ಧಾರವಾಡ 4, ಉತ್ತರ ಕನ್ನಡ 1, ಹಾಸನ 1 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದೆ.
ಬೆಳಗಾವಿ 9, ಕಲಬುರಗಿ10, ಹಾವೇರಿ 1, ಉತ್ತರ ಕನ್ನಡ 1, ದಾವಣಗೆರೆ 4, ವಿಜಯಪುರ 3, ಬಾಗಲಕೋಟೆ 3, ಮಂಡ್ಯ 1, ಬೆಂಗಳೂರು ನಗರ 19 ಸೇರಿ ಒಟ್ಟು 51 ಮಂದಿ ಕೊರೊನಾ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 705 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ 1431 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದಾಗಿ ಒಟ್ಟು 44 ಮಂದಿ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಪತ್ತೆ ಮಾಡಲಾಗಿರುವ 2182 ಪ್ರಕರಣಗಳಲ್ಲಿ 9 ಪ್ರಕರಣಗಳು ಕೇರಳದವರಾಗಿದ್ದು, ಕರ್ನಾಟಕದ ವಿಮಾನ ನಿಲ್ದಾಣಗಳ ಮೂಲಕ ಕೇರಳಕ್ಕೆ ಪ್ರಯಾಣಿಸುತ್ತಿರುವಾಗ ಪತ್ತೆ ಮಾಡಿ, ಅವರಿಗೆ ಕರ್ನಾಟಕದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.