ಲಕ್ನೋ, ಮೇ 25 (DaijiworldNews/PY) : ಖಾಸಗಿ ಶಾಲೆಯೊಂದರ ಶಿಕ್ಷಕಿ ಆನ್ಲೈನ್ ಪಾಠ ಮಾಡುತ್ತಿರುವ ಸಂದರ್ಭ ನಾಮಪದಕ್ಕೆ ಉದಾಹರಣೆಯಾಗಿ ಪಾಕಿಸ್ತಾನ ಎಂದು ಬಳಕೆ ಮಾಡಿ ಕಾರಣ ಅವರನ್ನು ಕೆಲಸದಿಂದ ವಜಾ ಮಾಡಿದ ಘಟನೆ ಉತ್ತರ ಪ್ರದೇಶದ ಗೋರಖ್ಪುರ್ನಲ್ಲಿ ನಡೆದಿದೆ.
ಶಿಕ್ಷಕಿ ಆನ್ಲೈನ್ ಪಾಠ ಮಾಡುತ್ತಿರುವಾಗ ಸಂದರ್ಭ, ಪಾಕಿಸ್ತಾನ ನಮ್ಮ ತಾಯ್ನಾಡು, ನಾನು ಪಾಕಿಸ್ತಾನ ಸೇನೆ ಸೇರುತ್ತೇನೆ. ರಶೀದ್ ಮಿಹನಾಸ್ ಧೀರ ಯೋಧ ಈ ರೀತಿಯಾದ ಉದಾಹರಣೆ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಆದರೆ, ಶಿಕ್ಷಕಿ, ನಾನು ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ನಾನು ಮಾಡಿದ್ದು ತಪ್ಪು. ನಾನು ದೇಶಪ್ರೇಮಿ ಶಾಲೆಯ ವ್ಯವಸ್ಥಾಪಕ ಮಂಡಳಿಗೆ ತಿಳಿಸಿದ್ದಾರೆ. ಉದಾಹರಣೆಗೆ ನಾನು ಭಾರತ ಎಂದು ಬಳಕೆ ಮಾಡುವವಳಿದ್ದೆ. ಆದರೆ, ವಾಕ್ಯವನ್ನು ಗಮನಿಸಿದೇ ಕಾಪಿ ಪೇಸ್ಟ್ ಮಾಡುವಾಗ ಹೀಗಾಗಿದೆ. ನನ್ನನ್ನು ಕ್ಷಮಿಸಿ ಎಂದು ಹೇಳಿದ್ದರು.
ಮೂಲಗಳ ಪ್ರಕಾರ, ಈ ಶಿಕ್ಷಕಿ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಈ ರೀತಿಯಾಗಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದು, ಶಾಲೆಯ ವಿರುದ್ದ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಶಾಲಾ ವ್ಯವಸ್ಥಾಪನಾ ಮಂಡಳಿಯು ಶಿಕ್ಷಕಿಯನ್ನು ಅಮಾನತು ಮಾಡಿ ಅವರಿಂದ ವಿವರಣೆ ಕೇಳಿದೆ.
ಶಿಕ್ಷಕಿಯ ವಿರುದ್ದ ದೇಶದ್ರೋಹದ ಆರೋಪ ಹೊರಿಸಿ ಬಂಧಿಸಬೇಕು ಎಂದು ಪೋಷಕರು ಹೇಳಿದ್ದಾರೆ. ಆದರೆ, ಈ ವಿಚಾರವಾಗಿ ಪೊಲೀಸರಿಗೆ ಯಾರೂ ದೂರು ನೀಡಿಲ್ಲ ಎಂದು ಮೂಲಗಳು ಹೇಳಿವೆ. ಆ ಶಿಕ್ಷಕಿಯನ್ನು ಸೋಮವಾರ ವಜಾ ಮಾಡಲಾಗಿದೆ. ಇದೆಲ್ಲಾ ಆದ ಬಳಿಕ ಶಿಕ್ಷಕಿ ಖಿನ್ನತೆಗೊಳಗಾಗಿದ್ದಾರೆ.