ಲಕ್ನೋ, ಮೇ 26 (DaijiworldNews/PY) : ವಲಸೆ ಕಾಮಿಕರ ಹಿತ ಕಾಯುವ ದೃಷ್ಠಿಯಲ್ಲಿ ಯುಪಿ ಸರ್ಕಾರವು ವಲಸೆ ಆಯೋಗ ರಚಿಸಲು ಮುಂದಾಗಿದ್ದು, ಬೇರೆ ರಾಜ್ಯಗಳು ನಮ್ಮ ವಲಸೆ ಕಾರ್ಮಿಕರನ್ನು ದುಡಿಸಿಕೊಳ್ಳುವ ಮೊದಲು ಉತ್ತರ ಪ್ರದೇಶ ಸರ್ಕಾರದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಆದೇಶಿಸಿದ್ದಾರೆ.
ಇಲ್ಲಿಯವರೆಗೆ ದೇಶದ ವಿವಿಧ ಕಡೆ ವಲಸೆ ಕಾರ್ಮಿಕರು ಭದ್ರತೆ ಇಲ್ಲದೇ ದುಡಿಯುತ್ತಿದ್ದರು. ಈಗ ಆಯೋಗದ ಕಾನೂನಿನ ಅನ್ವಯ. ಕಾರ್ಮಿಕರ ಅಗತ್ಯವಿರುವ ರಾಜ್ಯಗಳು ಇವರಿಗೆ ವಿಮೆ ಭರಿಸಬೇಕಾಗಿದ್ದು, ಕಾನೂನು, ಸಾಮಾಜಿಕ ಹಾಗೂ ವಿತ್ತೀಯ ಹಕ್ಕುಗಳ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಇದೀಗ ಕಾರ್ಮಿಕರ ನಕ್ಷೆಯನ್ನು ರಚಿಸಲು ಯುಪಿ ಸರ್ಕಾರ ಮುಂದಾಗಿದ್ದು, ವಲಸೆ ಕಾರ್ಮಿಕರ ಕೌಶಲಕ್ಕೆ ಅನುಗುಣವಾಗಿ, ಇತರ ರಾಜ್ಯಗಳಿಗೆ ಅಗತ್ಯವಿರುವ ಕಾರ್ಮಿಕ ಬೇಡಿಕೆಯನ್ನು ಸರ್ಕಾರವೇ ಪೂರೈಕೆ ಮಾಡಲಿದೆ.
ವಲಸೆ ಕಾರ್ಮಿಕತ್ತ ಮಹಾರಾಷ್ಟ್ರ ಸರಿಯಾಗಿ ಗಮನಹರಿಸುತ್ತಿಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದು, ಇದನ್ನು ಶಿವಸೇನೆ ಅಲ್ಲಗಳೆದಿದ್ದು, ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಹೊರಡುವ ಸಂದರ್ಭ ಸಿಎಂ ಉದ್ದವ್ ಠಾಕ್ರೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿಡಿಯೋಗಳು ನಮ್ಮಲ್ಲಿವೆ ಎಂದು ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯೋಗಿ ಅವರು, ಮಹಾರಾಷ್ಟ್ರಕ್ಕೆ ಕಾರ್ಮಿಕರು ಪುನಃ ಹೋಗಬೇಕಾದರೆ ಅಲ್ಲಿನ ಸರ್ಕಾರ ನಮ್ಮ ಪಡೆದುಕೊಳ್ಳುವುದು ಕಡ್ಡಾಯ ಎಂದು ಹೇಳಿದ್ದು, ಈ ಬಗ್ಗೆ ಎಂಎನ್ಎಸ್ ಕೂಡಾ ಆಕ್ಷೇಪ ವ್ಯಕ್ತಪಡಿಸಿದೆ.