ಬೀದರ್, ಮೇ 26 (Daijiworld News/MSP): ಎಂಟು ದಿನಗಳ ಹಿಂದೆಯಷ್ಟೇ ಮುಂಬೈನಿಂದ ತಮ್ಮೂರಿಗೆ ವಾಪಾಸ್ ಆಗಿ, ಕ್ವಾರಂಟೈನ್ ನಲ್ಲಿದ್ದ ಬೀದರ ಜಿಲ್ಲೆ ಔರಾದ ತಾಲೂಕಿನ ನಾರಾಯಣಪೂರ ಗ್ರಾಮದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಿಗ್ಗಿನ ಜಾನ ನಡೆದಿದೆ.
ಮೃತ ಯುವಕನನ್ನು ಸಚಿನ್ ಜಾದವ್ (22) ಎಂದು ಗುರುತಿಸಲಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಸಚಿನ್ ತನ್ನ ಪತ್ನಿಯೊಂದಿಗೆ ಔರಾದ ತಾಲೂಕಿನ ಮರಪಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಎಂಟು ದಿನಗಳಿಂದ ಕ್ವಾರಂಟೈನ್ ನಲ್ಲಿದ್ದ.
ಇಂದು ಮುಂಜಾನೆ ಪತ್ನಿ ಸ್ನಾನಕ್ಕೆಂದು ಹೋದಾಗ ಈತ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಔರಾದ ಪೊಲೀಸ ಠಾಣೆಯ ಪಿಎಸ್ ಐ ಭೇಟಿ ನೀಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.