ನವದೆಹಲಿ, ಮೇ 26 (Daijiworld News/MSP): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಯಲ್ಲಿ ಇದೇ ಮೇ 30 ರಂದು ಒಂದು ವರ್ಷ ಪೂರ್ಣಗೊಳ್ಳಲಿದೆ. ಇದನ್ನು ಗುರುತಿಸಲು ಬಿಜೆಪಿ ದೇಶಾದ್ಯಂತ ಕನಿಷ್ಟ 750 ವರ್ಚ್ಯುವಲ್ ರ್ಯಾಲಿಗಳನ್ನು ನಡೆಸಲು ಯೋಜನೆ ರೂಪಿಸಿದೆ.
ಆದರೆ ಈ ಹಿಂದಿನಂತೆ ಸಭೆಗಳು, ರ್ಯಾಲಿ ಗಳು ಇರದೆ ತಂತ್ರಜ್ಞಾನದ ಮೊರೆ ಹೋದ ಬಿಜೆಪಿ ಈ ಬಾರಿ 750 ವರ್ಚ್ಯುವಲ್ ರ್ಯಾಲಿಗಳನ್ನು ನಡೆಸಲು ಮುಂದಾಗಿದೆ.
ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕತ್ವದಿಂದ ಸುಮಾರು ೧೦೦೦ ವರ್ಚ್ಯುವಲ್ ಸಭೆಗಳು ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ. ಈ ಕುರಿತಂತೆ ಸೋಮವಾರ ಪಕ್ಷದ ರಾಜ್ಯದ ಅಧ್ಯಕ್ಷ ರು ಮತ್ತು ಪದಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಅವರು ತಿಳಿಸಿದ್ದಾರೆ.
ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರಧಾನ ಮಂತ್ರಿಗಳ "ಅತ್ಮ ನಿರ್ಭರ್ ಭಾರತ್" ಕೇಂದ್ರ ಬಿಂದುವಾಗಲಿದೆ ಎಂದು ಅವರು ಹೇಳಿದ್ದಾರೆ. ಪ್ರತಿ ವರ್ಚ್ಯುವಲ್ ರ್ಯಾಲಿಯಲ್ಲಿ ಕನಿಷ್ಟ750 ಮಂದಿ ಭಾಗಿಯಾಗಬೇಕು. ದೊಡ್ಡ ರಾಜ್ಯಗಳಲ್ಲಿ ಎರಡು ಹಾಗೂ ಸಣ್ಣ ರಾಜ್ಯದಲ್ಲಿ ಕನಿಷ್ಟ ಒಂದು ವರ್ಚ್ಯುವಲ್ ಸಭೆ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.