ಬೆಂಗಳೂರು, ಮೇ 26 (DaijiworldNews/PY) : ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದ ಕೆಲವು ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪ್ಯಾಕೇಜ್ ಕೇವಲ ಘೋಷಣೆಯಾಗಿಯೇ ಇದೆ. ಯಾರಿಗೂ ನಯಾ ಪೈಸೆ ಸಿಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯವರ್ತಿಗಳಿಗೆ ಕಮಿಷನ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬಡ ಟ್ಯಾಕ್ಸಿ, ಆಟೊ ಚಾಲಕರಿಗೆ ಅನಗತ್ಯ ಷರತ್ತುಗಳನ್ನು ವಿಧಿಸಿ ವಂಚನೆ ಮಾಡಲಾಗುತ್ತಿದೆ. ಇದರ ಬದಲು ಚಾಲಕರನ್ನು ಗುರುತಿಸಿ ಪರಿಹಾರ ಕೊಡುವುದ ಅಧಕಾರಿಗಳಿಗೆ ಕಷ್ಟವೇ ಎಂದು ತಿಳಿಸಿದರು.
ಡಿ.ವಿ ಸದಾನಂದ ಗೌಡ ಅವರ ಬಗ್ಗೆ ಮಾತನಾಡಿದ ಅವರು, ಸೋಮವಾರ ಅವರು ವಿಮಾನ ನಿಲ್ದಾಣದಲ್ಲಿ ಕನಿಷ್ಠ ಪಕ್ಷ ಪರೀಕ್ಷೆಗಾದರೂ ಒಳಪಟ್ಟು ಬೆಂಗಳೂರಿಗೆ ಬರಬಹುದಿತ್ತು ಎಂದರು.