ಬೆಂಗಳೂರು, ಮೇ 26 (Daijiworld News/MB) : ರಾಜ್ಯದಲ್ಲಿ ಮೇ 25ರ ಸಂಜೆ 5 ಗಂಟೆಯಿಂದ ಮೇ 26ರ ಮಧ್ಯಾಹ್ನ 12 ಗಂಟೆವರೆಗೆ ೧೦೦ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,282 ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ 7, ಚಿತ್ರದುರ್ಗ 20, ಹಾಸನ 13, ದಾವಣಗೆರೆ 11, ಯಾದಗಿರಿ 14, ವಿಜಯಪುರ 5, ಬೀದರ್ 10, ಬೆಳಗಾವಿ 13, ಉಡುಪಿ 2, ಕೋಲಾರ 2, ಬಳ್ಳಾರಿ, ಕೊಪ್ಪಳ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ.
17 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ ರಾಜ್ಯದಲ್ಲಿ 722 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಈವರೆಗೆ 44 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದು ಪ್ರಸ್ತುತ 1,514 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.