ಬೆಂಗಳೂರು,ಮೇ 26 (Daijiworld News/MB) : ರಾಜ್ಯದಲ್ಲಿ ಮೇ 25ರ ಸಂಜೆ 5ಗಂಟೆಯಿಂದ ಮೇ 26ರ ಸಂಜೆ 5 ಗಂಟೆವರೆಗೆ 101 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಸೋಂಕಿತರ ಸಂಖ್ಯೆ 2,283 ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರು ನಗರದಲ್ಲಿ 2, ಬೆಳಗಾವಿ 13, ಯಾದಗಿರಿ 14, ದಾವಣಗೆರೆ 11, ಹಾಸನ 13, ಉಡುಪಿ 3, ಬೀದರ್ 10, ವಿಜಯಪುರ 6, ಚಿತ್ರದುರ್ಗ 20, ಕೋಲಾರ 2, ಬಳ್ಳಾರಿ 1, ಕೊಪ್ಪಳ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದೆ.
43 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ ರಾಜ್ಯದಲ್ಲಿ 748 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಈವರೆಗೆ 46 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದು ಪ್ರಸ್ತುತ 1,489 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.