ನವದೆಹಲಿ, ಮೇ 27 (Daijiworld News/MB) : ವಿದೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಮರಳಿ ಕರೆತರುವ 'ವಂದೇ ಭಾರತ್ ಮಿಷನ್' ಯೋಜನೆಯ ಎರಡನೇ ಹಂತವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಜೂನ್ 13ರವರೆಗೂ ವಂದೇ ಭಾರತ್ ಮಿಷನ್ನ ಎರಡನೇ ಹಂತ ಮುಂದುವರೆಯಲಿದೆ. 60 ರಾಷ್ಟ್ರಗಳಲ್ಲಿ ಸಿಲುಕಿರುವ ಸುಮಾರು 1 ಲಕ್ಷ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ತರಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಸ್ತೃತ ಭಾಗದಲ್ಲಿ ಮತ್ತೆ 47 ದೇಶಗಳನ್ನು ಸೇರಿಸಲಾಗುತ್ತದೆ. 3 ನೇ ಹಂತದ ಸಿದ್ಧತೆಗಳ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.