ಬೆಂಗಳೂರು, ಮೇ 27 (Daijiworld News/MSP): ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಳಿಸಬೇಕಾದ ಹೊಸ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ಈ ಹೊಸ ಮಾರ್ಗಸೂಚಿಯ ಪ್ರಕಾರ ಶಂಕಿತ ವ್ಯಕ್ತಿಯಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೆ ಇದ್ದಲ್ಲಿ 10 ದಿನಗಳ ಬಳಿಕ ಡಿಸ್ಚಾರ್ಜ್ ಮಾಡಬಹುದಾಗಿದೆ ಎಂದು ತಿಳಿಸಿದೆ.
ಇನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲು 3 ದಿನಗಳಲ್ಲಿ ಯಾವುದೇ ರೀತಿಯ ಜ್ವರ ಹಾಗೂ ಸೋಂಕಿನ ಲಕ್ಷಣಗಳು ವ್ಯಕ್ತಿಯಲ್ಲಿ ಕಾಣಬಾರದು. ಬಿಡುಗಡೆ ಮಾಡುವ ನಾಲ್ಕು ದಿನಗಳ ಹಿಂದಿನಿಂದ ಕೃತಕ ಆಮ್ಲಜನಕದ ವ್ಯವಸ್ಥೆಯಲ್ಲಿ ಇರಬಾರದು. ಆಸ್ಪತ್ರೆಯಲ್ಲಿರುವಾಗ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೋನಾ ಪಾಸಿಟಿವ್ ಇದ್ದರೆ ಅವರಿಗೆ ಆರ್'ಟಿ ಪಿಸಿಆರ್ ಟೆಸ್ಟ್ ಮಾಡಿಸಬೇಕು. ಒಮ್ಮೆ ವರದಿಯಲ್ಲಿ ನೆಗೆಟಿವ್ ಬಂದರೂ ಕೂಡ ವಾರದ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಬೇಕಾಗುತ್ತದೆ.
ಇದರೊಂದಿಗೆ ಪ್ರತೀ ದಿನ ರೋಗಿಯ ದೇಹದ ತಾಪಮಾನ, ನಾಡಿ ಮಿಡಿತವನ್ನು ಪರೀಕ್ಷೆ ಮಾಡಬೇಕು. ಕೊರೋನಾ ಲಕ್ಷಣಗಳು ಕಂಡು ಬರದಿದ್ದರೆ, ಮೂರು ದಿನಗಳ ಬಳಿಕ ಆರ್'ಟಿ ಹಾಗೂ ಪಿಸಿಆರ್ ಪರೀಕ್ಷೆ ನಡೆಸಬೇಕು. ರಿಪೋರ್ಟ್ ನಲ್ಲಿ ನೆಗೆಟಿವ್ ಎಂದು ಬಂದರೆ ಮಾತ್ರ ಅವನ್ನು ಬಿಡುಗಡೆ ಮಾಡಲಾಗುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಸೋಂಕಿತರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಗಾಗಬೇಕಾಗುತ್ತದೆ.
ಆತ್ರವಲ್ಲದೆ ಎಲ್ಲಾ ಕೊರೋನಾ ಸೋಂಕಿತರು, ಚಿಕಿತ್ಸೆಗಾಗಿಯೇ ಮೀಸಲಟ್ಟಿರುವ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು. ಅದು ಸರ್ಕಾರಿ ಅಥವಾ ಖಾಸಗಿ ಕೊರೋನಾ ಹೆಲ್ತ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ