ಮೀರತ್, ಮೇ 27 (Daijiworld News/MSP): ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ನಡುವೆ ಛತ್ತೀಸ್ಗಡದ ದಂಪತಿ ತಮ್ಮ ನವಜಾತ ಅವಳಿ ಮಕ್ಕಳಿಗೆ 'ಕೊರೋನ' ಹಾಗೂ 'ಕೋವಿಡ್' ಎಂದು ಹೆಸರಿಟ್ಟಿದ್ದು ಸುದ್ದಿಯಾಗಿತ್ತು. ಆದೇ ಸಾಲಿನಲ್ಲಿ ಮೀರತ್ ನಗರದ ಮೋದಿಪುರಂ ಪ್ರದೇಶದ ದಂಪತಿಗಳು ತಮ್ಮ ನವಜಾತ ಅವಳಿ ಮಕ್ಕಳಿಗೆ 'ಕ್ವಾರೆಂಟೈನ್' ಮತ್ತು 'ಸ್ಯಾನಿಟೈಜರ್' ಎಂದು ಹೆಸರಿಟ್ಟಿದ್ದಾರೆ.
"ತಮ್ಮ ಮಕ್ಕಳಿಗೆ ಇಂಥ ಹೆಸರುಗಳನ್ನು ಏಕೆ ಆರಿಸಿದ್ದೀರಿ ಎಂದು ಕೇಳಿದಾಗ " ಕೊರೊನಾದಂತಹ ಮಾರಕ ಸಾಂಕ್ರಮಿಕ ರೋಗದ ಸಮಯದಲ್ಲಿ COVID-19 ವಿರುದ್ಧ ಹೋರಾಡಲು ಈ ಎರಡೂ ವಿಷಯಗಳು ಬಹಳ ಮುಖ್ಯವಾಗಿದೆ. ಕ್ವಾರೆಂಟೈನ್ ಮತ್ತು ಸ್ಯಾನಿಟೈಜರ್ - ಕೊರೊನಾ ವೈರಸ್ ನಿಂದ ಮಾನವರ ಸುರಕ್ಷತೆಯನ್ನು ಮಾಡುತ್ತದೆ. ಅದಕ್ಕಾಗಿಯೇ ನಾವು ನಮ್ಮ ಮಕ್ಕಳಿಗೆ ಈ ವಿಭಿನ್ನವಾದ ನಾಮಕರಣ ಮಾಡಿದ್ದೇವೆ. ನನ್ನ ಹೆರಿಗೆಯ ಸಮಯದಲ್ಲಿ ನಾನು ಕೂಡಾ ಕೊವೀಡ್ ಪರೀಕ್ಷೆಗೆ ಒಳಗಾಗಿದ್ದೇವೆ" ಎಂದು ಅವಳಿ್ ಮಕ್ಕಳ ತಾಯಿ ತಾಯಿ ವೇಣು ಹೇಳಿದ್ದಾರೆ .
"ಇಬ್ಬರೂ ನಮಗೆ ರಕ್ಷಣೆ ನೀಡುತ್ತಾರೆ. ಆದ್ದರಿಂದ, ಈ ಭದ್ರತೆಯ ಭಾವನೆಯು ಆಜೀವವಾಗಿರಬೇಕು. ನಮ್ಮ ಮಕ್ಕಳಿಗೆ ನಾವು ಕಂಡುಕೊಳ್ಳಬಹುದಾದ ಅತ್ಯುತ್ತಮ ಹೆಸರುಗಳು ಇವು" ಎಂದು ತಂದೆ ಧರ್ಮೇಂದ್ರ ಹೇಳಿದರು. ಈ ದಂಪತಿಗೆ ಈಗಾಗಲೇ ಮಣಿ ಎಂಬ ಹದಿಹರೆಯದ ಮಗಳಿದ್ದಾಳೆ.