ಬೆಂಗಳೂರು, ಮೇ 27 (Daijiworld News/MB) : ರಾಜ್ಯದಲ್ಲಿ ಮೇ 26ರ ಸಂಜೆ 5ಗಂಟೆಯಿಂದ ಮೇ 27ರ ಮಧ್ಯಾಹ್ನ 12 ಗಂಟೆವರೆಗೆ 122 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಒಬ್ಬರು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.
ಯಾದಗಿರಿ ಜಿಲ್ಲೆಗೆ ಮಹಾರಾಷ್ಟ್ರದಿಂದ ಹಿಂದಿರುಗಿದ 69 ವರ್ಷದ ಮಹಿಳೆ ಮೇ 20 ರಂದು ಸಾವನ್ನಪ್ಪಿದ್ದು ಗಂಟಲ ದ್ರವದ ಮಾದರಿಯನ್ನು ಪರೀಕ್ಷಿಸಿದಾಗ ಕೊರೊನಾ ಇರುವುದು ಖಚಿತವಾಗಿದೆ.
ಇಂದು ಬೆಂಗಳೂರು ನಗರದಲ್ಲಿ 6, ಬೆಂಗಳೂರು ಗ್ರಾಮಾಂತರ 2, ಕಲಬುರ್ಗಿ 28, ಯಾದಗಿರಿ 16, ಹಾಸನ 15, ಬೀದರ್ 12, ದಕ್ಷಿಣ ಕನ್ನಡ 11, ಉಡುಪಿ 9, ಉತ್ತರ ಕನ್ನಡ 6, ರಾಯಚೂರು 5, ಬೆಳಗಾವಿ 4, ಕಾರವಾರ 3, ಚಿಕ್ಕಮಗಳೂರು 3, ವಿಜಯಪುರ 2 ಮಂಡ್ಯ ಹಾಗೂ ತುಮಕೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿದೆ.
ರಾಜ್ಯದಲ್ಲಿ ಈವರೆಗೆ 2,405 ಮಂದಿಗೆ ಸೋಂಕು ತಗುಲಿದ್ದು 48 ಮಂದಿ ಸಾವನ್ನಪ್ಪಿದ್ದಾರೆ. ಇಂದು 14 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು 762 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.