ನವದೆಹಲಿ, ಮೇ 27 (Daijiworld News/MB) : ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿಯ ಅರ್ನಬ್ ಗೋಸ್ವಾಮಿ ಹಾಗೂ ಮತ್ತಿತರರ ವಿರುದ್ಧ 2 ವರ್ಷಗಳ ಹಿಂದೆ ಆತ್ಮಹತ್ಯೆಗೆ ಪ್ರಚೋದನೆ ಕುರಿತಾಗಿ ಸಿಐಡಿ ಮರು ಪರಿಶೀಲನೆ ನಡೆಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.
೨೦೧೮ರಲ್ಲಿ ೫೩ ವರ್ಷದ ಆರ್ಕಿಟೆಕ್ಟ್ ಅನ್ವಯ್ ನಾಯ್ಕ್ ಹಾಗೂ ಅವರ ತಾಯಿ ಕುಮುದ್ ನಾಯ್ಕ್ ಅವರು ತಮ್ಮ ಬಂಗಲೆಯಲ್ಲಿ ಶವವಾಗಿ ಪತ್ತೆಯಾಗಿದ್ದು ಈ ಬಗ್ಗೆ ಅವರ ಪುತ್ರಿ ಅದ್ನ್ಯ ನಾಯ್ಕ್ ನೀಡಿ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
ಈ ದೂರಿನಲ್ಲಿ ಅರ್ನಬ್ ಗೋಸ್ವಾಮಿ ಹಾಗೂ ಇತರರು ಇಬ್ಬರು ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆ. ಬಾಕಿ ಹಣ ಹಿಂದಿರುಗಿಸಿ ನೀಡದ ಕಾರಣ ತನ್ನ ತಂದೆ ಹಾಗೂ ಅಜ್ಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆಲಿಬಾಗ್ ಪೊಲೀಸರು ತನಿಖೆ ನಡೆಸಿರಲಿಲ್ಲ ಎಂದು ದೂರಲಾಗಿದ್ದು ಈ ಬಗ್ಗೆ ಸಾಕಷ್ಟು ಪುರಾವೆಗಳು ಇಲ್ಲ ಎಂದು ಸ್ಥಳೀಯ ಪೊಲೀಸರು ಕಳೆದ ವರ್ಷ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಆದರೆ ಇದೀಗ ಮಹಾರಾಷ್ಟ್ರ ಸರ್ಕಾರವು ಈ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ.
ಅನ್ವಯ್ ಅವರು ತಮ್ಮ ಸುಸೈಡ್ ನೋಟ್ನಲ್ಲಿ ಗೋಸ್ವಾಮಿ ಹಾಗೂ ಐಕಾಸ್ಟ್ ಎಕ್ಸ್/ಸ್ಕೈ ಮೀಡಿಯಾದ ಫಿರೋಝ್ ಶೇಖ್ ಹಾಗೂ ಸ್ಮಾರ್ಟ್ ವರ್ಕ್ನ ನಿತೀಶ್ ಸರ್ದ ಅವರು ತಮಗೆ 5.4 ಕೋಟಿ ರೂಪಾಯಿ ಪಾವತಿಸಲು ಬಾಕಿಯಿದೆ ಎಂದು ಬರೆದಿದ್ದರು.