ನವದೆಹಲಿ, ಮೇ 28 (DaijiworldNews/PY) : ವಿಶ್ವಸಂಸ್ಥೆಯ ಅಂಡರ್-ಸೆಕ್ರೆಟರಿ ಜನರಲ್ ಡಿಯೆಂಗ್ಗೆ ಕಾನೂನು ನೋಟಿಸ್ ಕಳುಹಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿದ ಸುಬ್ರಮಣಿಯನ್ ಸ್ವಾಮಿ ಅವರು, ವಿಶ್ವಸಂಸ್ಥೆಯ ಅಂಡರ್-ಸೆಕ್ರೆಟರಿ ಜನರಲ್ ಡಿಯೆಂಗ್ಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಇಷ್ಕಾರನ್ ಭಂಡಾರಿ ಅವರು, ರಮ್ನಿ ತನೇಜಾ, ರೋಕ್ಸಾನ ಸ್ವಾಮಿ ಹಾಗೂ ತಮ್ಮ ಇಬ್ಬರ ಮಕ್ಕಳ ಸಹಾಯದಿಂದ ಈ ನೋಟಿಸ್ ಅನ್ನು ಸಿದ್ದಪಡಿಸಿದ್ದಾರೆ. ಡಿಯೆಂಗ್ರಿಂದ ಈ ನೋಟಿಸ್ಗೆ ಪ್ರತಿಕ್ರಿಯೆ ಬಾರದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರು ಡಿಸೆಂಬರ್ 2019 ರಲ್ಲಿ ಪಾಕಿಸ್ತಾನದ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶವನವೊಂದರಲ್ಲಿ, ಭಾರತೀಯ ಸಂವಿಧಾನದಲ್ಲಿ ಮುಸ್ಲಿಮರು ಹಿಂದೂಗಳಿಗೆ ಸಮಾನರಲ್ಲ ಎಂದು ಹೇಳಿರುವುದಾಗಿ ಡಿಯೆಂಗ್ ಉಲ್ಲೇಖಸಿದ್ದರು.
ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಬ್ರಮಣಿಯನ್ ಸ್ವಾಮಿ, ಇದು ಒಂದು ಸುಳ್ಳು ಹೇಳಿಕೆಯಾಗಿದೆ. ಹಾಗಾಗಿ ನಾನು ಡಿಯೆಂಗ್ ವಿರುದ್ದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳುತ್ತೇನೆ ಎಂಬುದಾಗಿ ಮೇ 19ರಂದು ಟ್ವೀಟ್ ಮಾಡಿದ್ದರು.
ಭಾರತದಲ್ಲಿ ಸಿಎಎ ಅಂಗೀಕಾರ ಆದಾಗಿನಿಂದ ಅಲ್ಪಸಂಖ್ಯಾತ ಸಮುದಾಯದ ವಿರುದ್ದ ಹೆಚ್ಚಿನ ದ್ವೇಷದ ಮಾತು ಹಾಗೂ ತಾರತಮ್ಯದ ವರದಿಗಳ ಬಗ್ಗೆ ಈ ಹಿಂದೆ ವಿಶ್ವಸಂಸ್ಥೆಯ ಉನ್ನತ ಅಧಿಕಾರಿ ಅದಮಾ ಡಿಯೆಂಗ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದರು.