ಕೊಲ್ಕತ್ತಾ, ಮೇ 28 (Daijiworld News/MSP): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವಿನ ಕಿತ್ತಾಟ ಮುಂದುವರಿಯುತ್ತಲೇ ಇದೆ. ನರೇಂದ್ರ ಮೋದಿ ಸರ್ಕಾರ 2014ರಲ್ಲಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮೋದಿ ಹಾಗೂ ಮಮತಾ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಅನೇಕ ವಿಚಾರಗಳಲ್ಲಿ ಮೋದಿ ಹಾಗೂ ಮಮತಾ ನಡುವೆ ವಾಗ್ವಾದ ಏರ್ಪಟ್ಟ ಉದಾಹರಣೆಗಳಿವೆ.
ಇದೀಗ ಕೊರೋನಾ ವೈರಸ್ ಬಿಕ್ಕಟ್ಟನ್ನು ನಿಭಾಯಿಸುವ ವಿಚಾರದಲ್ಲೂ ಆರೋಪ -ಪ್ರತ್ಯಾರೋಪ ಕೇಳಿಬಂದಿದೆ. ಇದೀಗ ಕೇಂದ್ರದ ವಿರುದ್ದ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ " ಅಮಿತ್ ಶಾ ಅವರೇ , ನೀವು ಪಶ್ಚಿಮ ಬಂಗಾಳಕ್ಕೆ ಆಗ್ಗಾಗ್ಯೆ ಕೇಂದ್ರದ ತಂಡವನ್ನು ಕಳುಹಿಸುತ್ತಿರುತ್ತೀರಿ. ಅದನ್ನೇ ಮುಂದುವರಿಸಿ. ಆದರೆ ನೀವು ಪಶ್ಚಿಮ ಬಂಗಾಳ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅನಿಸುವುದಾದರೆ ನೀವೇ ಏಕೆ ಮಾಡಬಾರದು, ನೀವೇ ಮಾಡಿದರೆ ನನಗೆ ಏನೂ ತೊಂದರೆಯಿಲ್ಲಎಂದು ಖಾರವಾಗಿ ನುಡಿದ್ದಾರೆ.
ನಾನು ಕೊರೋನಾ ಹಬ್ಬುವುದಕ್ಕೆ ಏನು ಮಾಡಲು ಸಾಧ್ಯ. ಪಶ್ಚಿಮ ಬಂಗಾಳದಲ್ಲಿ ಬೇರೆ ರಾಜ್ಯಗಳಿಂದ ಬಂದವರಿಂದಾಗಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ನಮ್ಮ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದ್ರೆ ನೀವೆ ಏಕೆ ಇಲ್ಲಿನ ಕೆಲಸ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.