ಬೆಂಗಳೂರು, ಮೇ 28 (DaijiworldNews/PY) : ಕರ್ನಾಟಕದಲ್ಲಿ ಮೇ 27ರ ಸಂಜೆ 5ಗಂಟೆಯಿಂದ ಮೇ 28ರ ಮಧ್ಯಾಹ್ನ 12 ಗಂಟೆಯವರೆಗೆ 75 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ 2,493 ಮಂದಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ದಕ್ಷಿಣ ಕನ್ನಡದಲ್ಲಿ 6, ಬೆಂಗಳೂರು ನಗರದಲ್ಲಿ 7, ಯಾದಗಿರಿಯಲ್ಲಿ 7, ಉಡುಪಿಯಲ್ಲಿ 26, ಹಾಸನದಲ್ಲಿ 13, ಚಿತ್ರದುರ್ಗದಲ್ಲಿ 6, ಕಲಬುರಗಿಯಲ್ಲಿ 3, ಚಿಕ್ಕಮಗಳೂರಿನಲ್ಲಿ 3, ರಾಯಚೂರಿನಲ್ಲಿ 1, ವಿಜಯಪುರದಲ್ಲಿ 2ಪ್ರಕರಣ ಪತ್ತೆಯಾಗಿದೆ.
ಈವರೆಗೆ ರಾಜ್ಯದಲ್ಲಿ 809 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1,635 ಸಕ್ರಿಯ ಪ್ರಕರಣಗಳಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ.