ನವದೆಹಲಿ, ಮೇ 28 (Daijiworld News/MSP): ವಲಸಿಗರ ದುಃಸ್ಥಿತಿಯನ್ನು ಕೇಂದ್ರ ಸರ್ಕಾರ ಆಲಿಸುತ್ತಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮುಂದಿನ ಆರು ತಿಂಗಳವರೆಗೆ ದೇಶದ ಪ್ರತಿ ವಲಸೆ ಕಾರ್ಮಿಕರ ಕುಟುಂಬಕ್ಕೆ 7,500 ರೂ.ಗಳನ್ನು ಮತ್ತು ಅವರಿಗೆ ತಕ್ಷಣದ ಪರಿಹಾರವಾಗಿ 10,000 ರೂ ನೀಡಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ.
'ಸ್ಪೀಕ್ ಅಪ್ ಇಂಡಿಯಾ' ಅಭಿಯಾನದ ಭಾಗವಾದ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, " ವಲಸೆ ಕಾರ್ಮಿಕರ ಕಷ್ಚವನ್ನು ಪ್ರಧಾನಿ ನರೇಂದ್ರ ಮೋದಿ ಆಲಿಸುತ್ತಿಲ್ಲ, ಅವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಪ್ರತಿ ಕುಟುಂಬಕ್ಕೆ ಆರು ತಿಂಗಳವರೆಗೆ ನೇರವಾಗಿ ತಿಂಗಳಿಗೆ 7,500 ರೂ. ನಗದು ಪಾವತಿ ಮಾಡಿ ಮತ್ತು ತಕ್ಷಣ 10,000 ರೂಗಳನ್ನು ನೀಡಿ. ಕಾರ್ಮಿಕರ ಸುರಕ್ಷಿತ ಮತ್ತು ಉಚಿತ ಪ್ರಯಾಣಕ್ಕಾಗಿ ವ್ಯವಸ್ಥೆ ಮಾಡಿ. ಹಾಗೂ ಅವರ ಗ್ರಾಮದಲ್ಲಿಯೇ ಉದ್ಯೋಗವನ್ನು ಒದಗಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಡಿಯಲ್ಲಿ 200 ದಿನಗಳ ಕೆಲಸವನ್ನು ನೀಡಿ ಹಾಗೂ ಉಚಿತ ಪಡಿತರ ನೀಡಲಿ ಎಂದು ಅವರು ಒತ್ತಾಯಿಸಿದ್ದಾರೆ
ಕಳೆದ 2 ತಿಂಗಳಿಂದ ಲಾಕ್ ಡೌನ್ ನಿಂದಾಗಿ ಅಪಾರ ಪ್ರಮಾಣದ ಸಮಸ್ಯೆಗಳು ಉಂಟಾಗಿವೆ, ಆರ್ಥಿಕ ವ್ಯವಸ್ಥೆಯಲ್ಲಿ ಅನೇಕ ತೊಂದರೆಗಳು ಉಂಟಾಗಿದೆ. ಸ್ವಾತಂತ್ರ್ಯಾನಂತರ ಭಾರತದಲ್ಲಿ ಇದೇ ಮೊದಲ ಬಾರಿಗೆ ವಲಸೆ ಕಾರ್ಮಿಕರಿಗೆ ಇಷ್ಟು ದೊಡ್ಡ ಪ್ರಮಾಣದ ನೋವು ಮತ್ತು ಅವ್ಯವಸ್ಥೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.