ಬೆಂಗಳೂರು, ಮೇ 28 (DaijiworldNews/PY) : ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ವಿಮಾನದ ಮೂಲಕ ರಾಜ್ಯಕ್ಕೆ ಬರುವ ಜನರಿಗೆ ನಿರ್ಬಂಧ ಹೇರಲು ಸಚಿವ ಸಂಪುಟ ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಈ ಸಂದರ್ಭ ತಮಿಳುನಾಡು, ಮಹಾರಾಷ್ಟ್ರ ಹಾಗೂ ಗುಜರಾತ್ನ ಜನರು ರಸ್ತೆ ಮೂಲಕವೂ ರಾಜ್ಯಕ್ಕೆ ಬರಬಾರದು ಎಂದು ಸಚಿವ ಸಂಪುಟ ತಿಳಿಸಿದೆ.
ಕೊರೊನಾ ರೋಗಿಗಳ ಸಂಖ್ಯೆ ಈ ರಾಜ್ಯಗಳಲ್ಲಿ ಹೆಚ್ಚಾಗುತ್ತಿದ್ದು, ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವ ಸಲುವಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ.