ನವದೆಹಲಿ, ಮೇ 29 (Daijiworld News/MSP): ಚೀನಾದಲ್ಲಿ ಪ್ರಾರಂಭವಾದ ಕೊರೊನಾ ಆರ್ಭಟ, ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ರುದ್ರ ತಾಂಡವವಾಡುತ್ತಿದೆ. ವಿಶ್ವದಲ್ಲಿ ಕೊರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಇದೀಗ ಇರಾನ್ ಅನ್ನು ಹಿಂದಿಕ್ಕಿ 9ನೇ ಸ್ಥಾನಕ್ಕೇರಿದೆ.
ದಿನಕಳೆದಂತೆ ಭಾರತದಲ್ಲಿ ಕೊರೋನಾ ಕೇಸ್ ಗಳು ದ್ವಿಗುಣಗೊಳ್ಳುಳುತ್ತಾ ಸಾಗುತ್ತಿದ್ದು, ಅತಿ ಹೆಚ್ಚು ಕೊರೊನಾ ಕೇಸ್ಗಳ ದಾಖಲಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ಟಾಪ್ ಹತ್ತರೊಳಗೆ ಪ್ರವೇಶ ಪಡೆದಿತ್ತು. ಮೇ.25ರಂದು 1.42 ಲಕ್ಷ ಸೋಂಕಿತರ ಮೂಲಕ ಇರಾನ್ ಹಿಂದಿಕ್ಕಿ ಭಾರತ ಟಾಪ್ 10ಕ್ಕೆ ಬಂದಿತ್ತು. ಆದರೆ ಇದಾದ ೪ ದಿನದಲ್ಲಿ ಇರಾನ್ ದೇಶವನ್ನು ಹಿಂದಿಕ್ಕಿದ ಭಾರತ ಈಗ ಕೊವಿಡ್ ಪೀಡಿದ ರಾಷ್ಟ್ರಗಳ ಪೈಕಿ ೯ ನೇ ಸ್ಥಾನಕ್ಕೇರಿದೆ.
ಪ್ರಸ್ತುತ ಭಾರತದಲ್ಲಿ 1,65,386 ಸೋಂಕಿತರಿದ್ದು, ಚೀನಾಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ. ಚೀನಾದಲ್ಲಿ 84,106 ಸೋಂಕಿತರಿದ್ದರು. ಕೇವಲ ಸೋಂಕಿತರ ಸಂಖ್ಯೆಯಲ್ಲಿ ಮಾತ್ರವಲ್ಲ ಸಾವಿನ ಸಂಖ್ಯೆಯಲ್ಲೂ ಭಾರತ ಚೀನಾವನ್ನು ಹಿಂದಿಕ್ಕಿದ್ದು. ಭಾರತದಲ್ಲಿ ಕೊರೋನಾ ವೈರಸ್ ಗೆ 4,711 ಮಂದಿ ಸಾವನ್ನಪ್ಪಿದ್ದಾರೆ.
ಇನ್ನು ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿದ್ದು, ಅಲ್ಲಿ 17 ಲಕ್ಷ ಸೋಂಕಿತರಿದ್ದಾರೆ. ಅಮೆರಿಕ ಬಳಿಕ ಬ್ರೆಜಿಲ್, ರಷ್ಯಾ, ಯುಕೆ, ಸ್ಪೇನ್, ಇಟಲಿ, ಫ್ರಾನ್ಸ್ ಮತ್ತು ಜರ್ಮನಿ ರಾಷ್ಟ್ರಗಳಿದ್ದು, ಟರ್ಕಿ ಇದೀಗ 10 ಸ್ಥಾನಕ್ಕೇರಿದೆ. ಕೊರೋನಾ ವೈರಸ್ ತವರು ಚೀನಾ 14ನೇ ಸ್ಥಾನದಲ್ಲಿದ್ದು, ಬಳಿಕ ಇರಾನ್, ಪೆರು ಮತ್ತು ಕೆನಡಾ ದೇಶಗಳಿವೆ.