ತಿರುವನಂತಪುರ, ಮೇ 29 (DaijiworldNews/PY) : ಆರೋಗ್ಯ ಮಾರ್ಗಸೂಚಿಗಳನ್ನು ಜನ ಅನುಸರಿಸದಿದ್ದಲ್ಲಿ ರಾಜ್ಯ ಸಮುದಾಯ ಪ್ರಸರಣ ಹಂತಕ್ಕೆ ಜಾರುತ್ತದೆ. ಈವರೆಗೆ ಸಾಧಿಸಿಕೊಂಡಿದ್ದನ್ನೆಲ್ಲ ರಾಜ್ಯ ಕಳೆದುಕೊಳ್ಳುವ ಅಪಾಯಗಳಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಕಣ್ಗಾವಲಿನ ವ್ಯವಸ್ಥೆ ಉತ್ತಮವಾಗಿದ್ದು, ಹಾಗಾಗಿ ಸಮುದಾಯ ಪ್ರಸರಣ ಹಂತಕ್ಕೆ ರಾಜ್ಯ ಜಾರಿಲ್ಲ. ರಾಜ್ಯದಲ್ಲಿ ಕೊರೊನಾ ವೈರಸ್ ಸಮುದಾಯ ಪ್ರಸರಣೆ ಹಂತಕ್ಕೆ ತಲುಪಿಲ್ಲ ಎಂದು ತಿಳಿಸಿದ್ದಾರೆ.
ಈವರೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಸಮುದಾಯ ಪ್ರಸರಣೆ ಕಂಡು ಬಂದಿಲ್ಲ. ಆದರೆ, ಎಂದಿಗೂ ಅದು ಸಂಭವಿಸಿಲ್ಲ ಎಂದು ನಾನು ಹೇಳಲು ಸಾಧ್ಯವಿಲ್ಲ. ನಾವು ರಾಜ್ಯದಲ್ಲಿ ಸೋಂಕು ಪತ್ತೆ ಪರೀಕ್ಷೆಗೆ ಸಂಬಂಧಪಟ್ಟಂತೆ ಐಸಿಎಂಆರ್ ನಿರ್ದೇಶನಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಿದ್ದೇವೆ. ಐಸಿಎಂಆರ್ ಪ್ರತಿಕಾಯ ಪರೀಕ್ಷೆಗೆ ಸೂಚನೆ ನೀಡಿದೆಯಾದರೂ, ಅದು ಕಲ್ಪಿಸಿರುವ ಪರೀಕ್ಷಾ ಕಿಟ್ಗಳು ಉತ್ತಮವಾಗಿಲ್ಲ ಎಂದಿದ್ದಾರೆ.