ಭೋಪಾಲ, ಮೇ 30 (DaijiworldNews/PY) : ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿ ಅವರು ಶ್ರಮಿಸುತ್ತಿದ್ದಾರೆ. ನಮಗೆ ಇದು ಪ್ರೇರಣದಾಯಕವಾಗಿದೆ. ಅವರ ಹೆಸರಲ್ಲಿ ಮಂತ್ರವಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಮೋದಿ ಎಂಬ ಪದದ ಪ್ರತೀ ಅಕ್ಷರಗಳಿಗೂ ಅವರು ಒಂದೊಂದು ಉದಾಹರಣೆ ನೀಡಿದ್ದು, ಮೋದಿ ಹೆಸರಿನಲ್ಲಿರುವ ಎಂ ಅಕ್ಷರವು ಪ್ರೇರಣಾದಾಯಕವಾಗಿದ್ದು, ಮೋದಿ ಅವರು ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ. ನಮಗೆಲ್ಲರಿಗೂ ಇದು ಪ್ರೇರಣೆಯಾಗಿದೆ. ಓ ಎನ್ನುವ ಅಕ್ಷರವು ಅವಕಾಶವಾಗಿದ್ದು, ರಾಷ್ಟ್ರದ ಸುಪ್ತ ಅವಕಾಶಗಳನ್ನು ಅವರು ಹೊರತರುವಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಡಿ ಅಕ್ಷರು ಪ್ರಬಲವಾದ ನಾಯಕತ್ವನ್ನು ಸೂಚಿಸುತ್ತದೆ. ಐ ಎನ್ನುವ ಅಕ್ಷರವು ಸ್ಪೂರ್ತಿಯನ್ನು ಸೂಚಿಸುತ್ತದೆ. ಭಾರತವನ್ನು ಸ್ವಾವಲಂಭಿ ದೇಶವನ್ನಾಗಿ ಮಾಡುವ ಅವರ ಪ್ರಯತ್ನಗಳು ನಮಗೆ ಸ್ಪೂರ್ತಿಯಾಗಿದೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿ ಒಂದು ವರ್ಷ ಪೂರ್ಣಗೊಂಡ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಜನರನ್ನು ಉದ್ದೇಶಿಸಿ ಪತ್ರ ಬರೆದಿದ್ದು, ಅದರಲ್ಲಿ ಪ್ರಮುಖ ನಿರ್ಧಾರಗಳು, ಸಾಧನೆಗಳು, ಸರ್ಕಾರ ಜಾರಿಗೆ ತಂದ ಯೋಜನೆಗಳು, ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟ ಹಾಗೂ ಇತರೆ ವಿಚಾರಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಕೇಂದ್ರ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ್ದು, ಈ ಸಂದರ್ಭ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. .