ಬೆಂಗಳೂರು, ಮೇ 30 (DaijiworldNews/PY) : ದೇಶದಲ್ಲಿ ಭಯದ ವಾತಾವರಣ ಸೃಷ್ಠಿಮಾಡಿ, ಜನರು ಪ್ರತಿಭಟನೆ ಮಾಡುವಂತೆ ಮಾಡಿದ್ದೇ ಕೇಂದ್ರ ಸರ್ಕಾರ ಮಾಡಿರುವ ಒಂದು ವರ್ಷದ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರೈತರು, ಸಣ್ಣ ಕೈಗಾರಿಕೆಗಳಿಗೆ ನಿರ್ಲಕ್ಷ್ಯ ತೋರಿದೆ. ಒಟ್ಟಾರೆಯಾಗಿ ಇಡೀ ದೇಶದ ಅಭಿವೃದ್ದಿ ಹಿಂದೆ ಉಳಿದಿದೆ. ಯಾವುದೇ ಸ್ಪಷ್ಟವಾದ ಯೋಜನೆಯಿಲ್ಲ. ಸಂಸದರ ಮಾದರಿ ಗ್ರಾಮಕ್ಕೆ ಹಣ ನೀಡಲಿಲ್ಲ ಎಂದರು.
ನಿರುದ್ಯೋಗದ ಪ್ರಮಾಣ ಶೇ 24ರಷ್ಟಿದೆ. ಜಿಡಿಪಿ ಪ್ರಮಾಣ ಕೂಡಾ ಕುಸಿತ ಕಂಡಿದೆ. ಜಾಗತಿಕ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದ್ದರೂ, ಜನರಿಗೆ ಅದರ ಲಾಭ ಸಿಗದಂತೆ ಮಾಡಲಾಗಿದೆ. ಆರ್ಥಿಕ ವಿಚಾರದಲ್ಲೂ ಸರ್ಕಾರ ಕೊರೊನಾ ಬರುವುದಕ್ಕೂ ಮುನ್ನ ಭಾರಿ ವಿಫಲವಾಗಿತ್ತು ಎಂದು ಹೇಳಿದರು.
ಲಾಕ್ಡೌನ್ ಪೂರ್ಣ ವಿಫಲವಾಗಿದೆ. ಅವರಿಗೆ ನಾವು ಕೂಡಾ ಸಹಕಾರ ನೀಡಿದ್ದೇವೆ. ಮಾತುಕತೆ ಯಾವ ವಿಚಾರದಲ್ಲಿಯೂ ಇಲ್ಲ. ವ್ಯವಹಾರ ಜ್ಞಾನ ಇಲ್ಲದವರಿಂದಾಗಿ ಈ ಪರಿಸ್ಥಿತಿ ಒದಗಿದೆ ಎಂದು ಟೀಕೆ ಮಾಡಿದರು.