ನವದೆಹಲಿ, ಮೇ 31 (Daijiworld News/MB) : ಪುರುಷರ ಗುಂಪು ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದನ್ನು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಹಂಚಿಕೊಂಡ ಅವರು, ಈ ವೀಡಿಯೊದಲ್ಲಿನ ಹಿಂಸಾಚಾರವನ್ನು ಪ್ರತ್ಯೇಕವಾಗಿಲ್ಲ. ಭಾರತದ ಮಹಿಳೆಯರು ಎಂದಿಗೂ ಎದುರಿಸುತ್ತಾ ಬರುತ್ತಿರುವುದು ಇದನ್ನೆ. ಹಿಂಸಾಚಾರ ಅನೇಕ ರೂಪದಲ್ಲಿದ್ದು ಮಹಿಳೆಯನ್ನು ತಿರಸ್ಕಾರ ಹಾಗೂ ಅಗೌರವದಿಂದ ಕಾಣುತ್ತಿರುವ ಸಂದರ್ಭದಲ್ಲೇ ಸ್ತ್ರೀತ್ವದ ಸಂಕೇತಗಳನ್ನು ವೈಭವೀಕರಿಸಲು ಅದನ್ನು ಉಳಿಸಿಕೊಳ್ಳಲಾಗಿದೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.